ಹಿರಿಯ ಪತ್ರಿಕೋದ್ಯಮಿ…ಮೈಸೂರು ಮಿತ್ರ ಸಂಸ್ಥಾಪಕ…ಡಾ.ಕೆ.ಬಿ.ಗಣಪತಿ ನಿಧನ…

ಹಿರಿಯ ಪತ್ರಿಕೋದ್ಯಮಿ…ಮೈಸೂರು ಮಿತ್ರ ಸಂಸ್ಥಾಪಕ…ಡಾ.ಕೆ.ಬಿ.ಗಣಪತಿ ನಿಧನ…

ಮೈಸೂರು,ಜು13,Tv10 ಕನ್ನಡ

ಹಿರಿಯ ಪತ್ರಕರ್ತ ಹಾಗೂ ಪತ್ರಿಕೋದ್ಯಮಿ ಮತ್ತು ಪತ್ರಿಕಾರಂಗದ ಹಲವು ಪ್ರಶಸ್ತಿಗಳ ಒಡೆಯ ಡಾ.ಕೆ.ಬಿ.ಗಣಪತಿ(85) ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಕೆ.ಬಿ.ಗಣಪತಿ ರವರು ನಿಧನ ಹೊಂದಿದ್ದಾರೆ.ಮೈಸೂರು ಸ್ಥಳೀಯ ಪತ್ರಿಕೆಗಳಲ್ಲಿ ನಂಬರ್ ಒನ್ ಸ್ಥಾನ ಪಡೆದು ಜನಮಾನಸದಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಸ್ಥಾಪಕರಾಗಿದ್ದ ಡಾ.ಕೆ.ಬಿ.ಗಣಪತಿ ರವರು ಅಪಾರ ಸ್ನೇಹಿತರು,ಹಿತೈಷಿಗಳು,ಬಂಧುಗಳು ಹಾಗೂ ಕುಟುಂಬವರ್ಗವನ್ನ ಅಗಲಿದ್ದಾರೆ.ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಕೆ.ಸಿ.ಲೇಔಟ್ ನಲ್ಲಿರುವ ಸ್ವಗೃಹಕ್ಕೆ ಪಾರ್ಥಿವ ಶರೀರವನ್ನ ತರಲಿದ್ದು ಅಂತಿಮ ದರುಶನ ವ್ಯವಸ್ಥೆ ಮಾಡಲಿದ್ದಾರೆ.ಸಂಜೆ 4 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

27-12-1939 ರಲ್ಲಿ ಜನಿಸಿದ ಗಣಪತಿ ರವರು ಬಿಎಬಿಎಲ್ ವ್ಯಾಸಂಗ ಮುಗಿಸಿ 1970 ದಶಕದಲ್ಲಿ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡಿದ್ರು.1978 ರಲ್ಲಿ ಮೈಸೂರು ಮಿತ್ರ ದೈನಂದಿನ ಪತ್ರಿಕೆ ಆರಂಭಿಸಿದರು.ನಂತರ ಸಂಜೆ ಪತ್ರಿಕೆಯಾಗಿ ಸ್ಟಾರ್ ಆಫ್ ಮೈಸೂರ್ ಸಹ ಆರಂಭಿಸಿದರು.ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಗಣಪತಿ ರವರು ಜನರ ಸಮಸ್ಯೆಗಳಿಗೆ ತಮ್ಮ ಪತ್ರಿಕೆ ಮೂಲಕ ಸ್ಪಂದಿಸುತ್ತಾ ಪತ್ರಿಕಾರಂಗದಲ್ಲಿ ಅಜಾನುಬಾಹುವಾಗಿ ಬೆಳೆದರು.ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ,ಹೆಚ್.ಕೆ.ವೀರಣ್ಣಗೌಡ ಪ್ರಶಸ್ತಿ,ಪಿ.ಆರ್.ರಾಮಣ್ಣ ಪ್ರಶಸ್ತಿ,ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ,ಮೊಹಾರೆ ಹನುಮಂತರಾಯ ಪ್ರಶಸ್ತಿಗೆ ಭಾಜನರಾಗಿ ಪತ್ರಿಕಾರಂಗಕ್ಕೆ ಅನೇಕ ಕೊಡುಗೆಗಳನ್ನ ಕೊಟ್ಟರು.2023 ರಲ್ಲಿ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತು.ಕೆಲವು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಅವಿರತವಾಗಿ ಶ್ರಮಿಸಿ ಓದುಗರ ನೆಚ್ಚಿನ ಮಿತ್ರನಾಗಿ ಬೆಳೆದ ಡಾ.ಕೆ.ಬಿ.ಗಣಪತಿ ರವರು ಅಪಾರ ಸ್ನೇಹಿತರು,ಬಂಧುಬಳಗದವರು,ಹಿತೈಷಿಗಳನ್ನ ಅಗಲಿದ್ದಾರೆ.ಎಡಿಟರ್ ಕಾಲಂ ನಲ್ಲಿ ತಮ್ಮ ಮೊನಚಾದ ಲೇಖನಗಳಿಂದಲೇ ರಾಜ್ಯದ ಕಣ್ಣು ತೆರೆಸಿದ್ದ ಗಣಪತಿ ರವರು ಲೇಖನಿಗೆ ಫುಲ್ ಸ್ಟಾಪ್ ಹಾಡಿದ್ದಾರೆ.ಡಾ.ಕೆ.ಬಿ.ಗಣಪತಿ ಅಗಲಿಕೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.ಪತ್ನಿ ರಾಲಿ ಗಣಪತಿ ಹಾಗೂ ಪುತ್ರರಾದ ವಿಕ್ರಂ ಮುತ್ತಣ್ಣ ಮತ್ತು ಮಿಕ್ಕಿ ಬೋಪಣ್ಣ ರವರನ್ನೂ ಅಗಲಿರುವ ಡಾ.ಕೆ.ಬಿ.ಗಣಪತಿ ರವರ ಆತ್ಮಕ್ಕೆ ಶಾಂತಿ ದೊರೆಯಲಿ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *