
ನ್ಯಾಯಾಲಯವನ್ನೇ ಯಾಮಾರಿಸಿದ ಭೂಪ…ಒಂದೇ ಆಸ್ತಿ ಪ್ರತ್ಯೇಕ ಆಧಾರ್ ಕಾರ್ಡ್ ಬಳಸಿ ಆರೋಪಿಯ ಜಾಮೀನಿಗೆ ಬಳಕೆ…ಆಸ್ತಿ ಮಾಲೀಕನ ವಿರುದ್ದ FIR…
- TV10 Kannada Exclusive
- July 22, 2025
- No Comment
- 15
ಮೈಸೂರು,ಜು22,Tv10 ಕನ್ನಡ
ಒಂದೇ ಆಸ್ತಿಯನ್ನ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ನ ಬಳಸಿ ವಿವಿದ ನ್ಯಾಯಾಲಯಗಳಲ್ಲಿ ಆರೋಪಿಗಳ ಜಾಮೀನಿಗೆ ಬಳಸಿದ ಆರೋಪದ ಮೇಲೆ ಆಸ್ತಿ ಮಾಲೀಕನ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಹೆಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ವೀರಭದ್ರಶೆಟ್ಟಿ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ನ್ಯಾಯಾಲಯದ ಸಿಬ್ಬಂದಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದ ಆರೋಪಿ ಅಪ್ಸರ್ ಎಂಬಾತನಿಗೆ ಜಾಮೀನು ನೀಡಲು ವೀರಭದ್ರಶೆಟ್ಟಿ ತಮ್ಮ ಆಸ್ತಿಯನ್ನ ಒತ್ತೆಯಾಗಿ ಆಧಾರ್ ಕಾರ್ಡ್ ಸಮೇತ ಒದಗಿಸಿದ್ದರು.ಆದರೆ ಇದೇ ಆಸ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ಮ ಬಳಸಿ ಬೇರೆ ಬೇರೆ ನ್ಯಾಯಾಲಯಗಳಲ್ಲೂ ಜಾಮೀನು ನೀಡಲು ಬಳಸಿರುವುದು ಕಂಡು ಬಂದ ಹಿನ್ನಲೆ ನ್ಯಾಯಾಧೀಶರ ಆದೇಶದಂತೆ ವಂಚನೆ ಪ್ರಕರಣ ದಾಖಲಿಸಲಾಗಿದೆ…