
ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಗೆ ಬಿಗ್ ರಿಲೀಫ್…ಅಮಾನತು ಆದೇಶ ರದ್ದು…24 ಗಂಟೆಯಲ್ಲೇ ವಾಪಸ್ ಕರ್ತವ್ಯಕ್ಕೆ…
- TV10 Kannada Exclusive
- July 28, 2025
- No Comment
- 116
ಮೈಸೂರು,ಜು28,Tv10 ಕನ್ನಡ
ಸಾಂಸ್ಕೃತಿಕ ನಗರಿಯಲ್ಲಿ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾದ ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಅಮಾನತಾಗಿದ್ದ ಎನ್.ಆರ್.ಠಾಣೆಯ ನಿರೀಕ್ಷಕರಾದ ಲಕ್ಷ್ಮಿಕಾಂತ ತಳವಾರ್ ರವರ ಆದೇಶ ರದ್ದಾಗಿದೆ. ಆದೇಶ ಮಾಡಿ ಕೇವಲ 24 ಗಂಟೆ ಒಳಗೇ ರದ್ದಾಗಿರುವುದು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಲಕ್ಷ್ಮಿಕಾಂತ ತಳವಾರ್ ಎನ್.ಆರ್.ಠಾಣೆಯಲ್ಲಿ ಮತ್ತೆ ಡ್ಯೂಟಿ ಮುಂದುವರೆಸಿದ್ದಾರೆ.ತಯಾರಿಕಾ ಘಟಕದಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ದೊರೆತಿದೆ ಎಂದು ಹೇಳಲಾಗಿದ್ದು ಈ ಹಿನ್ನಲೆ ನಗರ ಪೊಲೀಸ್ ಆಯುಕ್ತರು ಆಡಳಿತಾತ್ಮಕ ದೃಷ್ಟಿಯಿಂದ ಎಂಬ ಕಾರಣ ನೀಡಿ ಅಮಾನತು ಪಡಿಸಿ ಆದೇಶ ಹೊರಡಿಸಿದ್ದರು.ಪೊಲೀಸ್ ಕಮೀಷನರ್ ಆದೇಶ ಕೇವಲ 24 ಗಂಟೆಒಳಗೆ ರದ್ದಾಗಿದೆ…