
ಯುವಕನನ್ನ ಅಕ್ರಮವಾಗಿ ಬಂಧನದಲ್ಲಿಟ್ಟು ಹಣ ವಸೂಲಿ ಮಾಡಿದ ಆರೋಪ…ಹುಣಸೂರು ಗ್ರಾಮಾಂತರ ಠಾಣೆ ಹಿಂದಿನ ಇನ್ಸ್‌ಪೆಕ್ಟರ್ ಸಿ.ವಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಸೂಚನೆ…
- CrimeTV10 Kannada Exclusive
- August 7, 2025
- No Comment
- 117

ಹುಣಸೂರು,ಅ7,Tv10ಕನ್ನಡ
ಯುವಕನನ್ನು ಅಕ್ರಮ ಬಂಧನದಲ್ಲಿಟ್ಟು ಆತನಿಂದ 40 ಸಾವಿರ ರೂ. ಹಣ ಪಡೆದು ಸುಳ್ಳು ಪ್ರಕರಣ ದಾಖಲಿಸಿದ ಆರೋಪದಡಿ ಹುಣಸೂರು ಗ್ರಾಮಾಂತರ ಠಾಣೆಯ ಹಿಂದಿನ 2022-23 ರಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಸಿ.ವಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಿ ವರದಿ ಸಲ್ಲಿಸುವಂತೆ ಹುಣಸೂರು ಟೌನ್ ಪೊಲೀಸರಿಗೆ ಹುಣಸೂರು ಜೆಎಂಎಫ್‌ಸಿ ನ್ಯಾಯಾ ಲಯದ ನ್ಯಾಯಾಧೀಶರಾದ ಅನಿತಾ ಅವರು ಆದೇಶ ನೀಡಿರುತ್ತಾರೆ.
ಹುಣಸೂರು ತಾಲೂಕು ಕಡೇಮನುಗನಹಳ್ಳಿ ಗ್ರಾಮದ ಅಶೋಕ್ ಎಂಬ ಯುವಕನನ್ನು 2023ರ ಆಗಸ್ಟ್ 9ರಿಂದ 12 ರವರೆಗೆ ಸರ್ಕಲ್ ಇನ್ಸಪೆಕ್ಟರ್ ಸಿ.ವಿ.ರವಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿದ್ದರು. ಆತನನ್ನು ಬೆದರಿಸಿ 40 ಸಾವಿರ ರೂ. ಪಡೆದ ನಂತರ ಯುವಕನ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಸರ್ಕಲ್ ಇನ್ಸ್‌ಪೆಕ್ಟರ್ ಸಿ.ವಿ.ರವಿ ಹಾಗೂ ಇತರರ ವಿರುದ್ಧ ಐಪಿಸಿ ಸೆಕ್ಷನ್ 343 ಮತ್ತು 383ರಡಿ ಎಫ್‌ಐಆರ್ ದಾಖಲಿಸಿ,ವರದಿಯನ್ನು ಸೆ.15ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹುಣಸೂರು ಟೌನ್ ಪೋಲಿಸರಿಗೆ ಆದೇಶಿಸಿದ್ದಾರೆ.ಸಿ.ವಿ ರವಿ ರವರು ಹುಣಸೂರು ಠಾಣೆಯಲ್ಲಿ 2022-23ರಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು…