ಸ್ಕ್ರಾಪ್ ಐಟಂ ವ್ಯಾಪಾರಿಗೆ ಬೆದರಿಸಿ ರಾಬರಿ…10 ಲಕ್ಷ ಕ್ಯಾಶ್ ಕಸಿದ ಖದೀಮರು…ನಾಲ್ವರ ವಿರುದ್ದ ಪ್ರಕರಣ ದಾಖಲು…

ಸ್ಕ್ರಾಪ್ ಐಟಂ ವ್ಯಾಪಾರಿಗೆ ಬೆದರಿಸಿ ರಾಬರಿ…10 ಲಕ್ಷ ಕ್ಯಾಶ್ ಕಸಿದ ಖದೀಮರು…ನಾಲ್ವರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಆ6,Tv10 ಕನ್ನಡ

ತಾಮ್ರ ಹಿತ್ತಾಳೆ ಸ್ಕ್ರಾಪ್ ವ್ಯಾಪಾರ ಮಾಡುವ ವ್ಯಾಪಾರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ 10 ಲಕ್ಷ ಕ್ಯಾಶ್ ಸುಲಿಗೆ ಮಾಡಿದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಂಗಳೂರಿನ ಜಯನಗರ ನಿವಾಸಿ ಅಬ್ದುಲ್ ಆಸಿಫ್ ಹಣ ಕಳೆದುಕೊಂಡವರು.ಮೈಸೂರು ನಿವಾಸಿ ಅಫ್ಸರ್ ಖಾನ್ ಹಾಗೂ ಮೂವರು ಸೇರಿ ಹಣ ಸುಲಿಗೆ ಮಾಡಿದ ಖದೀಮರು.

ಅಬ್ದುಲ್ ಲತೀಫ್ ರವರು ಆಗಾಗ ಮೈಸೂರಿಗೆ ಬಂದು ಸ್ಕ್ರಾಪ್ ಐಟಂ ಖರೀದಿಸುತ್ತಾರೆ.ಇತ್ತೀಚೆಗೆ ಅಬ್ದುಲ್ ಆಸಿಫ್ ಪರಿಚಯವಾಗಿದ್ದಾನೆ.800 ಕೆಜಿ ಸ್ಕ್ರಾಪ್ ಇದೆ ಕೆಜಿ ಗೆ 1500/- ರೂ ಎಂದು ಅಪ್ಸರ್ ಖಾನ್ ಆಮಿಷ ತೋರಿಸಿದ್ದಾನೆ.ಇದನ್ನ ನಂಬಿದ ಅಬ್ದುಲ್ ಲತೀಫ್ ತನ್ನ ಸಂಭಂಧಿಕರಾದ ಮೊಕ್ತಿಯಾರ್ ಪಾಷಾ ರವರನ್ನ ಜೊತೆಗೆ ಕರೆದುಕೊಂಡು ಓಮ್ನಿ ವ್ಯಾನ್ ನಲ್ಲಿ 10 ಲಕ್ಷ ಸಮೇತ ಮೈಸೂರಿಗೆ ಬಂದಿದ್ದಾರೆ.ಮಣಿಪಾಲ್ ಜಂಕ್ಷನ್ ಬಳಿ ಬಂದು ಅಪ್ಸರ್ ಖಾನ್ ಗೆ ಬರುವಂತೆ ತಿಳಿಸಿದ್ದಾರೆ.ಸ್ಥಳಕ್ಕೆ ಬಂದ ಅಪ್ಸರ್ ಓಮ್ನಿ ಹತ್ತಿ ಜೆಕೆ ಟೈರ್ಸ್ ಕಡೆಗೆ ಕರೆದೊಯ್ದಿದ್ದಾನೆ.ರಸ್ತೆ ಮಧ್ಯೆ ಮುಕ್ತಿಯಾರ್ ಪಾಷಾ ರನ್ನ ಇಳಿಸಿ ಸ್ಕ್ರಾಪ್ ತೋರಿಸುವುದಾಗಿ ತಾನೇ ಓಮ್ನಿ ಚಾಲನೆ ಮಾಡಿದ್ದಾನೆ.ಸ್ವಲ್ಪ ದೂರ ತೆರಳಿದ ನಂತರ ಕಾರ್ ನಿಲ್ಲಿಸಿ ಹಾರನ್ ಮಾಡಿದಾಗ ಮೂವರು ವ್ಯಕ್ತಿಗಳು ಪ್ರತ್ಯಕ್ಷವಾಗಿ ಕಾರನ್ನ ಸುತ್ತುವರೆದಿದ್ದಾರೆ.ಬಲವಂತವಾಗಿ ಅಫ್ಸರ್ ಖಾನ್ ನ್ನು ಪಕ್ಕದ ಸೀಟ್ ಗೆ ತಳ್ಳಿ ಮೂವರ ಪೈಕಿ ಓರ್ವ ಕಾರನ್ನ ಓಡಿಸಿದ್ದಾನೆ.ಉಳಿದಿಬ್ಬರು ಅಬ್ದುಲ್ ಆಸಿಫ್ ಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಕ್ಯಾಶ್ ಬ್ಯಾಗ್ ಕಸಿದುಕೊಂಡಿದ್ದಾರೆ.ಸ್ವಲ್ಪ ದೂರ ತೆರಳಿದ ನಂತರ ಕಾರನ್ನ ಬಿಟ್ಟು ಓಡಿದ್ದಾರೆ.ಅಪ್ಸರ್ ಖಾನ್ ಪ್ಲಾನ್ ಮಾಡಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವುದಾಗಿ ಅಬ್ದುಲ್ ಲತೀಫ್ ಆರೋಪಿಸಿದ್ದು ನಾಲ್ವರ ವಿರುದ್ದ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *