
ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಎರಡು ಜಿಂಕೆ ಕೊಂಬು ಪತ್ತೆ…ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು…
- Crime
- August 7, 2025
- No Comment
- 38
ನಂಜನಗೂಡು,ಆ7,Tv10 ಕನ್ನಡ
ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಎರಡು ಜಿಂಕೆ ಕೊಂಬುಗಳು ಪತ್ತೆಯಾಗಿದೆ.ಅನಾದಿ ಕಾಲದ ವಾಸದ ಮನೆಯಲ್ಲಿ ಇಡಲಾಗಿದ್ದ ಜಿಂಕೆ ಕೊಂಬುಗಳನ್ನ ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.ನಂಜನಗೂಡು ತಾಲೂಕು ಹೊಸಕೋಟೆ(ಮಸಗೆ) ಗ್ರಾಮದ ಮನೆಯಲ್ಲಿ ಪತ್ತೆಯಾಗಿದೆ.ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವಕುಮಾರ್ ರವರಿಗೆ ಸೇರಿದ ಮನೆಯಲ್ಲಿ ಕೊಂಬುಗಳನ್ನ ವಶಕ್ಕೆ ಪಡೆಯಲಾಗಿದೆ.
ನಂಜನಗೂಡು ವಿಭಾಗದ ಅರಣ್ಯ ಅಧಿಕಾರಿ ನಿತಿನ್ ಮತ್ತು ಶ್ರೀನಿವಾಸ್ ನೇತೃತ್ವದ ತಂಡ ದಾಳಿ ನಡೆಸಿದೆ.ಫ್ಯಾಷನ್ ಗಾಗಿ ಜಿಂಕೆ ಕೊಂಬುಗಳನ್ನ ಬಳಸಿಕೊಳ್ಳಲಾಗಿತ್ತೆಂದು ಹೇಳಲಾಗಿದೆ.ಆರೋಪಿ ಶಿವಕುಮಾರ್ ನಾಪತ್ತೆಯಾಗಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಇಲ್ಲದೆ ವನ್ಯ ಪ್ರಾಣಿಗಳಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದಲ್ಲಿ ಹಾಗೂ ಕಾನೂನು ಬಾಹಿರವಾಗಿ ವನ್ಯ ಜೀವಿಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಿಸಿದ್ದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.
ಕಾರ್ಯಚರಣೆಯಲ್ಲಿ ಸಹಾಯಕಾ ಅರಣ್ಯ ಅಧಿಕಾರಿ ಶ್ರೀನಿವಾಸ್ ಗಸ್ತು ಪಾಲಕರಾದ ವೈಶಾಖ ಧನಂಜಯ್ ಚಾಲಕರಾದ ನಾಗ ನಿಂಗರಾಜು ಸುನಿಲ್ ಮತ್ತು ಮಂಜು ಭಾಗವಹಿಸಿದ್ದರು…