
ಮೇಟಗಳ್ಳಿ ಸ್ಮಶಾನ ಸುತ್ತ ಬೆಳಕಿನ ಭಾಗ್ಯ…ಹೈಮಾಸ್ಕ್ ದೀಪಗಳಿಗೆ ಮರುಜೀವ…Tv10 ಕನ್ನಡ ವರದಿಗೆ ಪಾಲಿಕೆ ಸ್ಪಂದನೆ…ಗಾಂಜಾ ವ್ಯಸನಿಗಳ ಹಾವಳಿಗೆ ಬ್ರೇಕ್…
- TV10 Kannada Exclusive
- August 7, 2025
- No Comment
- 93







ಮೈಸೂರು,ಆ7,Tv10 ಕನ್ನಡ




ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಮುಳುಗುತ್ತಿದ್ದ ಮೇಟಗಳ್ಳಿ ಸ್ಮಶಾನಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.ಸ್ಮಶಾನದ ಸುತ್ತ ಅಳವಡಿಸಲಾಗಿದ್ದ ಹೈಮಾಸ್ಕ್ ದೀಪಗಳನ್ನ ದುರಸ್ಥಿ ಮಾಡಲಾಗಿದೆ.ಕಳೆದ 5 ವರ್ಷಗಳಿಂದ ನಿರ್ಜೀವವಾಗಿದ್ದ ಹೈಮಾಸ್ಕ್ ದೀಪಗಳಿಗೆ ಮರುಜೀವ ದೊರೆತಂತಾಗಿದೆ.ಇದು Tv10 ಕನ್ನಡ ವರದಿಯ ಫಲಶೃತಿಯಾಗಿದೆ. ಮೈಸೂರು ಮಹಾನಗರ ಪಾಲಿಕೆ ಕೆಇಬಿ ಇಂಜಿನಿಯರ್ ಗೋವಿಂದ ನಾಯಕ್ ಮತ್ತು ಸಿಬ್ಬಂದಿಗಳು ದೀಪಗಳನ್ನ ಅಳವಡಿಸಿ ಸ್ಮಶಾನಕ್ಕೆ ಬೆಳಕಿನ ಭಾಗ್ಯ ನೀಡಿದ್ದಾರೆ.ಮೇಟಗಳ್ಳಿ ಇನ್ಸ್ಪೆಕ್ಟರ್ ಅರುಣ್ ರವರು ಬೀದಿ ದೀಪಗಳನ್ನ ಸರಿಪಡಿಸುವಂತೆ ಪಾಲಿಕೆಗೆ ಮಾಡಿದ್ದ ಮನವಿಗೂ ಸ್ಪಂದನೆ ದೊರೆತಂತಾಗಿದೆ. 5 ಹೈ ಮಾಸ್ಕ್ ವಿದ್ಯುತ್ ಕಂಬಗಳಿಗೆ ಮರುಜೀವ ಬಂದಿದೆ

ಕತ್ತಲಾದರೆ ಮೇಟಗಳ್ಳಿ ಸ್ಮಶಾನ ಗಾಂಜಾ ವ್ಯಸನಿಗಳ ತಾಣವಾಗುತ್ತಿತ್ತು.ಸ್ಥಳೀಯರಿಗಂತೂ ಕಿರಿಕಿರಿ ಆಗುತ್ತಿತ್ತು.ಕೆಲವು ದಿನಗಳ ಹಿಂದೆ ಇನ್ಸ್ಪೆಕ್ಟರ್ ಅರುಣ್ ರವರು ಧಢೀರ್ ದಾಳಿ ನಡೆಸಿ ಗಾಂಜಾ ವ್ಯಸನಿಗಳಿಗೆ ಎಚ್ಚರಿಕೆ ಗಂಟೆ ನೀಡಿದ್ದರು.ಕತ್ತಲು ಇರುವ ಕಾರಣ ವ್ಯಸನಿಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದರು.ಬೀದಿ ದೀಪಗಳನ್ನ ಸರಿಪಡಿಸುವಂತೆ ಸಾಕಷ್ಟು ಮನವಿಗಳನ್ನೂ ಸಲ್ಲಿಸಲಾಗಿತ್ತು.ಈ ಅವ್ಯವಸ್ಥೆ ಬಗ್ಗೆ ಇತ್ತೀಚೆಗೆ Tv10 ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಿ ಪಾಲಿಕೆ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.ಎಚ್ಚೆತ್ತ ಅಧಿಕಾರಿಗಳು ಇಂದು ಹೈಮಾಸ್ಕ್ ದೀಪಗಳಿಗೆ ಬಲ್ಪ್ ಗಳನ್ನ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ.ಇದರಿಂದಾಗಿ ಗಾಂಜಾ ವ್ಯಸನಿಗಳ ಕಾಟ ತಪ್ಪಿದಂತಾಗಿದೆ.ಇದು Tv10 ಕನ್ನಡ ಇಂಪ್ಯಾಕ್ಟ್ ಆಗಿದೆ…