
ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…
- TV10 Kannada Exclusive
- August 8, 2025
- No Comment
- 265
ಮೈಸೂರು,ಆ8,Tv10 ಕನ್ನಡ
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ರವರ ಪುಣ್ಯಭೂಮಿಯನ್ನ ಧ್ವಂಸಗೊಳಿಸಿದ ಪ್ರಕರಣ ಮೈಸೂರಿನಲ್ಲಿ ಪ್ರತಿಧ್ವನಿಸಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್ ಉದ್ಯಾನವನ ಮುಂಭಾಗ ಅಭಿಮಾನಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿ ಘಟನೆಯನ್ನ ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿ ಬಳಗದ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ ಇಂದು ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದರೆ ವಿಷ್ಣು ಅಭಿಮಾನಿಗಳಿಗೆ ಇಂದು ಕರಾಳ ದಿನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಷ್ಣು ವರ್ಧನ್ ರವರ ಪುಣ್ಯಭೂಮಿಯನ್ನು ಧ್ವಂಸ ಮಾಡಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಈ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಅಭಿಮಾನಿಗಳ ಸಭೆ ಕರೆದು ಇದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಹಾಗೂ ಅಭಿಮಾನಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಎಸ್ ಏನ್ ರಾಜೇಶ್, ವಿನಯ್ ಕಣಗಾಲ್, ಬೈರತಿ ಲಿಂಗರಾಜು, ಲೋಕೇಶ್, ಮಹಾನ್ ಶ್ರೇಯಸ್, ಬಸವರಾಜ್, ಸಂತೋಷ್, ಚಿನ್ನ ಬೆಳ್ಳಿ ಸಿದ್ದಪ್ಪ, ಮಹದೇವ್, ಸುಚೀಂದ್ರ, ಮಿರ್ಲೆ ಪನೀಶ್, ಹೊಸಮಠ, ಅಭಿ, ಹಾಗೂ ಇನ್ನಿತರ ವಿಷ್ಣು ಅಭಿಮಾನಿಗಳು ಭಾಗಿಯಾಗಿದ್ದರು..