
ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…
- TV10 Kannada Exclusive
- August 8, 2025
- No Comment
- 51

ಮೈಸೂರು,ಆ8,Tv10 ಕನ್ನಡ
ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನೆರವೇರಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಟ್ಟಡ ಉದ್ಘಾಟಿಸಲಿದ್ದಾರೆ.ಈ ಹಿನ್ನಲೆ ಭದ್ರತೆ ದೃಷ್ಠಿಯಿಂದ ಕಟ್ಟಡಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ,ಸಂಚಾರ ಮತ್ತು ಅಪರಾಧ ಡಿಸಿಪಿ ರವರಾದ ಸುಂದರ್ ರಾಜ್ ಕೆ.ಆರ್.ಉಪವಿಭಾಗದ ಎಸಿಪಿ ರಮೇಶ್ ಕುಮಾರ್, ಕೆ ಆರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನರಾಜ್,
ಹಾಗೂ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ನಿರ್ದೇಶಕರುಗಳಾದ ನo ಸಿದ್ದಪ್ಪ, ಎಂ ಡಿ ಪಾರ್ಥ ಸಾರಥಿ, ನವೀನ್ ಕುಮಾರ್, ಹೆಚ್ ವಿ ಭಾಸ್ಕರ್, ಗಣೇಶ್ ಮೂರ್ತಿ ಹಾಗೂ ಇನ್ನಿತರರು ಹಾಜರಿದ್ದರು..