
ದಸರಾ ಗಜಪಡೆಗೆ ತೂಕ ಪ್ರಕ್ರಿಯೆ…ಭೀಮ ಬಲಶಾಲಿ..
- TV10 Kannada Exclusive
- August 11, 2025
- No Comment
- 95


ಮೈಸೂರು,ಆ11,Tv10 ಕನ್ನಡ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2025 ರ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ.ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿದ
ದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಯಿತು.
ನಿನ್ನೆಯಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತೂಕ ಪರೀಶೀಲನೆ ಮಾಡಲಾಯಿತು.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ., ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಮಾಡಲಾಯಿತು.
ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಿ ತಯಾರಿ ನೀಡಲಾಗುತ್ತದೆ.
ಈ ಮೂಲಕ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ಆರಂಭವಾಗಿದೆ.
ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ನಿತ್ಯ ತಾಲೀಮು ಮಾಡಲಾಗುತ್ತದೆ.
ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ.
ಆನೆಗಳ ತೂಕದ ವಿವರ
ಅಭಿಮನ್ಯು – 5,360 ಕೆ ಜಿ
ಧನಂಜಯ – 5,310 ಕೆ ಜಿ
ಕಾವೇರಿ – 3,010 ಕೆ ಜಿ
ಲಕ್ಷ್ಮಿ – 3,730 ಕೆ ಜಿ
ಭೀಮ – 5,465 ಕೆ ಜಿ
ಏಕಲವ್ಯ – 5,305 ಕೆ ಜಿ
ಮಹೇಂದ್ರ – 5,120 ಕೆ ಜಿ
ಕಂಜನ್ – 4,880 ಕೆ ಜಿ
ಪ್ರಶಾಂತ – 5,110 ಕೆ ಜಿ ತೂಕ.
*ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನೇ ಹಿಂದಿಕ್ಕಿದ ಭೀಮನೇ ಅತ್ಯಂತ ಹೆಚ್ಚಿನ ಬಲಶಾಲಿ ಎಂಬುದು ಸಾಬೀತಾಗಿದೆ…