
ನಕಲಿ ದಾಖಲೆ ಸಲ್ಲಿಸಿ SBI ಗೆ 27.16 ಲಕ್ಷ ಧೋಖಾ…ಮೂವರ ವಿರುದ್ದ ಪ್ರತ್ಯೇಕ FIR…
- Crime
- August 16, 2025
- No Comment
- 273

ನಕಲಿ ದಾಖಲೆ ಸಲ್ಲಿಸಿ SBI ಗೆ 27.16 ಲಕ್ಷ ಧೋಖಾ…ಮೂವರ ವಿರುದ್ದ ಪ್ರತ್ಯೇಕ FIR…
ಮೈಸೂರು,ಆ16,Tv10 ಕನ್ನಡ

ನಕಲಿ ದಾಖಲೆಗಳನ್ನ ಸಲ್ಲಿಸಿ ಮೈಸೂರಿನ ಬೃಂದಾವನ ಬಡಾವಣೆಯ SBI ಬ್ಯಾಂಕ್ ಗೆ ಮೂವರು ಐನಾತಿಗಳು 27.16 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ವಂಚಕರ ವಿರುದ್ದ ಬ್ರಾಂಚ್ ಮ್ಯಾನೇಜರ್ ಪ್ರತಿಭಾ ರವರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ್ ಪ್ರಕರಣಗಳನ್ನ ದಾಖಲಿಸಿದ್ದಾರೆ.
ಕೆ.ಆರ್.ನಗರ ಮೂಲದ ಮೇಘ ಎಂಬ ಮಹಿಳೆ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಾಸಿಕ ಸಂಬಳ 34,700/- ರೂ ಬರುತ್ತಿದ್ದು ಬೃಂದಾವನ ಬಡಾವಣೆಯ ಕೆನರಾ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ.ಸ್ಯಾಲರಿ ಸರ್ಟಿಫಿಕೇಟ್,ಬ್ಯಾಂಕ್ ನಲ್ಲಿ ವಹಿವಾಟು ನಡೆಸಿರುವ ಲೆಡ್ಜರ್ ಎಕ್ಟ್ರಾಕ್ಟ್ ಸೇರಿದಂತೆ ಸಾಕಷ್ಟು ದಾಖಲೆಗಳನ್ನ ನಕಲಿಯಾಗಿ ಸೃಷ್ಟಿಸಿ ಸಲ್ಲಿಸಿದ್ದಾರೆ.ಈ ದಾಖಲೆಗಳ ಆಧಾರದ ಮೇಲೆ SBI ನಿಂದ 9.16 ಲಕ್ಷ ಸಾಲ ಮಂಜೂರಾಗಿದೆ.ಹಣ ಮರುಪಾವತಿ ಮಾಡದೆ ಸುಸ್ತಿಯಾದಾಗ ಬ್ಯಾಂಕ್ ನಿಂದ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಮೇಘಾ ಬ್ಯಾಂಕ್ ಗೆ ನಕಲಿ ದಾಖಲೆಗಳನ್ನ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಎರಡನೇ ಪ್ರಕರಣದಲ್ಲಿ ಕ್ಯಾತಮಾರನಹಳ್ಳಿಯ ರವಿಕುಮಾರ್ ಎಂಬುವರು ಸಗ್ರಹ ಮ್ಯಾನೇಜ್ ಮೆಂಟ್ ಸರ್ವಿಸಸ್ ಪ್ರೈ ಲಿಮಿಟೆಡ್ ನಲ್ಲಿ ಟೀಮ್ ಲೀಡರ್ ಎಂದು ನಂಬಿಸಿ 37,800 ರೂ ಮಾಸಿಕ ಸಂಬಳ ಬರುತ್ತಿರುವುದಾಗಿ ನಕಲಿ ಸ್ಯಾಲರಿ ಸರ್ಟಿಫಿಕೇಟ್,ಬ್ಯಾಂಕ್ ವಹಿವಾಟಿನ ದಾಖಲೆಗಳನ್ನ ಸಲ್ಲಿಸಿ 8 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ.
ಮೂರನೇ ಪ್ರಕರಣದಲ್ಲಿ ರಾಘವೇಂದ್ರ ನಗರದ ಪಿ.ದೀಪಕ್ ಎಂಬುವರು ಸ್ಯಾನ್ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿಯ ಸೇಲ್ಸ್ ಆಫೀಸರ್ ಎಂದು ನಂಬಿಸಿ ಮಾಸಿಕ 22,817/- ರೂ ಸಂಬಳ ಬರುತ್ತಿರುವುದಾಗಿ ಹಾಗೂ ಬ್ಯಾಂಕ್ ವಹಿವಾಟಿನ ನಕಲಿ ದಾಖಲೆ ಸೃಷ್ಟಿಸಿ SBI ನಿಂದ 6 ಲಕ್ಷ ಸಾಲ ಪಡೆದಿದ್ದಾರೆ.
ಮೂರು ವಂಚಕರೂ ಸಹ ಒಂದೇ ರೀತಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಬ್ಯಾಂಕ್ ಗೆ ವಂಚಿಸಿದ್ದಾರೆ.ನ್ಯಾಯಾಲಯದ ಆದೇಶದಂತೆ ವಿವಿಪುರಂ ಠಾಣಾ ಪೊಲೀಸರು ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…