
ಗ್ರಾ.ಪಂ.ಗೆ ಬೀಗ ಜಡಿದು ಆಕ್ರೋಷ…ಕೃಷಿ ಸಚಿವರ ತವರು ಕ್ಷೇತ್ರದಲ್ಲಿ ಘಟನೆ…ಬಿಂಡಿಗನವಿಲೆ ಹೋಬಳಿ ನಿವಾಸಿಗಳ ಸಿಟ್ಟು…
- TV10 Kannada Exclusive
- August 14, 2025
- No Comment
- 49

ಮಂಡ್ಯ,ಆ14,Tv10 ಕನ್ನಡ

ಕೃಷಿ ಸಚಿವರ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲವೆಂದು ಆರೋಪಿಸಿ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಹೊನ್ನಾವರದ ಜನ ಗ್ರಾಮಪಂಚಾಯ್ತಿಗೆ ಬೀಗ ಜಡಿದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಹೊನ್ನಾವರ ಗ್ರಾಮದ ವಾರ್ಡ್ ನಂಬರ್ 2ರ ನಿವಾಸಿಗಳು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮ ಸಭೆ ನಡೆಯುವಾಗ ಏಕಾಏಕಿ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಸಿಟ್ಟು ಪ್ರದರ್ಶಿಸಿದ್ದಾರೆ.
ಚರಂಡಿ ಇಲ್ಲ, ವಿದ್ಯುತ್ ದೀಪ ಇಲ್ಲ, ರಸ್ತೆ ಇಲ್ಲ, ನಲ್ಲಿಯಲ್ಲಿ ನೀರು ಸರಿಯಾಗಿ ಬರಲ್ಲ.
ಯಾರೊಬ್ಬರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಚಲುವರಾಯಸ್ವಾಮಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾದ ಬಳಿಕ ನಾಪತ್ತೆಯಾಗಿದ್ದಾರೆ.
ನಮ್ಮ ಗ್ರಾಮಕ್ಕೆ ಬಂದಿಲ್ಲ, ಸಮಸ್ಯೆ ಕೇಳಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.
ರಸ್ತೆ ಗುಂಡಿಗಳಿಗೆ ನಾಟಿ ಮಾಡಿ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದ್ದಾರೆ…