
ಮಹಿಳಾ ಪೌರಕಾರ್ಮಿಕರಿಗೆ ಬಾಗಿನ…ಗೌರಿ ಗಣೇಶ ಹಬ್ಬದ ಅಂಗವಾಗಿ ಕಾರ್ಯಕ್ರಮ…
- TV10 Kannada Exclusive
- August 22, 2025
- No Comment
- 38

ಮಹಿಳಾ ಪೌರಕಾರ್ಮಿಕರಿಗೆ ಬಾಗಿನ…ಗೌರಿ ಗಣೇಶ ಹಬ್ಬದ ಅಂಗವಾಗಿ ಕಾರ್ಯಕ್ರಮ…
ಮೈಸೂರು,ಆ22,Tv10 ಕನ್ನಡ
ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಹಾಗೂ
ಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರವಿಸಲಾಯಿತು.
ಅರಿಶಿಣ -ಕುಂಕುಮ, ಸೀರೆ, ಬಳೆ ಮೊರದ ಬಾಗಿನ ನೀಡಲಾಯಿತು.
ಇದೇ ವೇಳೆ ಮಾತನಾಡಿದ
ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ
ಮೈಸೂರಿನ ಅರಮನೆ ಸುಂದರವಾಗಿ ಹಾಗೂ ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಶ್ರಮ ಹೆಚ್ಚು.ಅಂಥವರನ್ನು ಗುರುತಿಸಿ ಬಾಗಿನ ನೀಡಿರುವುದು ನಮಗೂ ಸಂತೋಷ ಉಂಟು ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ.ಅಥರ್ವ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ, ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಮಂಜುಳಾ ಸೋಮಣ್ಣ, ಜ್ಯೋತಿ, ವರ್ಷಿಣಿ, ಹಾಗೂ ಪೌರಕಾರ್ಮಿಕ ಸಿಬ್ಬಂದಿಗಳು ಹಾಜರಿದ್ದರು…