
ದರೋಡೆ ಆರೋಪಿ ಕಾಲಿಗೆ ಗುಂಡಿನ ರುಚಿ…ಪೇದೆ ಮೇಲೆ ಅಟ್ಯಾಕ್ ಮಾಡಿದ ಆರೋಪಿ…ಆತ್ಮರಕ್ಷಣೆಗಾಗಿ ಫೈರಿಂಗ್…
- Crime
- August 22, 2025
- No Comment
- 145

ದರೋಡೆ ಆರೋಪಿ ಕಾಲಿಗೆ ಗುಂಡಿನ ರುಚಿ…ಪೇದೆ ಮೇಲೆ ಅಟ್ಯಾಕ್ ಮಾಡಿದ ಆರೋಪಿ…ಆತ್ಮರಕ್ಷಣೆಗಾಗಿ ಫೈರಿಂಗ್…
ಮಂಡ್ಯ,ಆ22,Tv10 ಕನ್ನಡ
ಚಿನ್ನದಂಗಡಿ ಕಳ್ಳತನ ಮಾಡುವುದನ್ನು ಕಂಡ ಹೋಟೆಲ್ ಮಾಲೀಕನ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದ
ಪ್ರಮುಖ ಆರೋಪಿಗೆ ಮಂಡ್ಯ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.
ಆರೋಪಿ ಕಿರಣ್ ಕಾಲಿಗೆ ಪೊಲೀಸರ ಗುಂಡೇಟು ಬಿದ್ದಿದೆ.ಬಂಧಿಸುವ ವೇಳೆ ಪೊಲೀಸ್ ಪೇದೆ ಮೇಲೆ ಚಾಕುವಿನಿಂದ ಕಿರಣ್ ಹಲ್ಲೆ ಮಾಡಿದ್ದಾನೆ.ಈ ವೇಳೆ ಪ್ರಾಣ ರಕ್ಷಣೆಗಾಗಿ ಆರೋಪಿ ಕಾಲಿಗೆ ಖಾಕಿ ಗುಂಡು ಹೊಡೆದಿದೆ.
ಹಲಗೂರು ಠಾಣೆ CPI ಶ್ರೀಧರ್ ಅವರು ಫೈರಿಂಗ್ ಮಾಡಿ ಪೇದೆ ನೆರವಿಗೆ ಬಂದಿದ್ದಾರೆ.
ಮಂಡ್ಯದ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಬಳಿ ಘಟನೆ ನಡೆದಿದೆ.
ಆಗಸ್ಟ್ 17ರಂದು ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯುವೆಲರಿ ಶಾಪ್‌ಗೆ ದರೋಡೆ ಗ್ಯಾಂಗ್ ಕನ್ನ ಹಾಕಿತ್ತು.
ಬೆಳಗಿನ ಜಾವ 3ಗಂಟೆ ಸಮಯದಲ್ಲಿ ಗ್ಯಾಸ್ ಕಟರ್‌ನಿಂದ ಶೆಟರ್ ಮುರಿದು ಕಳ್ಳತನ ಮಾಡಲಾಗಿತ್ತು.
110ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಕಳವು ಮಾಡಿದ್ದರು. ಐವರು ಖದೀಮರ ತಂಡ ಕೃತ್ಯವೆಸಗಿತ್ತು.
ಕಳ್ಳತನ ಮಾಡುವುದನ್ನ ನೋಡಿದ ಪಕ್ಕದ ಹೋಟೆಲ್ ಮಾಲೀಕ ಮಾದಪ್ಪರನ್ನ
ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಖದೀಮರು ಎಸ್ಕೇಪ್ ಆಗಿದ್ದರು.
ಈಚಗರೆ ಗ್ರಾಮದ ಕಿರಣ್(24), ಕೊತ್ತತ್ತಿ ಗ್ರಾಮದ ಆನಂದ್, ಶರತ್, ಶ್ರೀನಿವಾಸ್, ಕೃಷ್ಣಾಚಾರಿ ಬಂಧಿತರು.
ಕೇರಳದಲ್ಲೂ ವಾಹನ ಕಳ್ಳತನ ಪ್ರಕರಣದಲ್ಲಿ ಆನಂದ್ ಭಾಗಿಯಾಗಿದ್ದರು.
ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…