ಪಿಸ್ತೂಲ್ ಹಿಡಿದ ಫೋಟೋ ಫೇಸ್ ಬುಕ್ ನಲ್ಲಿ ಅಪ್ ಲೋಡ್…ಯುವಕನ ವಿರುದ್ದ FIR…
- Crime
- August 24, 2025
- No Comment
- 56
ಮೈಸೂರು,ಆ24,Tv10 ಕನ್ನಡ
ಕೈಯಲ್ಲಿ ಪಿಸ್ತೂಲ್ ಹಿಡಿದು ಭಯದ ವಾತಾವರಣ ಸೃಷ್ಟಿಸುವಂತೆ ಫೇಸ್ ಬುಕ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿದ್ದ ಯುವಕನ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನ ಸವಾಯಿ ಚೌಕದಲ್ಲಿರುವ ಆಲ್ ಬುರ್ಜ್ ಪರ್ಫ್ಯೂಮ್ ಅಂಗಡಿಯಲ್ಲಿ ಕೆಲಸ ಮಾಡುವ ಅಜೀಜ್ ಶರೀಫ್ ಎಂಬ ಯುವಕನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಅಪರಾಧ ವಿಭಾಗ ಹಾಗೂ ಸೋಷಿಯಲ್ ಮೀಡಿಯಾ ನಿರ್ವಹಣೆ ಮಾಡುವ ಮಂಡಿ ಪೊಲೀಸ್ ಠಾಣಾ ಸಿಬ್ಬಂದಿ ಪ್ರೇಮ್ ಕುಮಾರ್ ರವರು ಪರಿಶೀಲನೆ ಮಾಡುತ್ತಿದ್ದ ವೇಳೆ ಅಜೀಜ್ ಶರೀಫ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಪಿಸ್ತೂಲ್ ಹಿಡಿದು ಭಯದ ವಾತಾವರಣ ಸೃಷ್ಟಿಸುವಂತಹ ಫೋಟೋ ಹಾಕಿರುವುದು ಬೆಳಕಿಗೆ ಬಂದಿದೆ.ಈ ಹಿನ್ನಲೆ ಅಜೀಜ್ ಷರೀಫ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…