16,500/- ಹಾಕಿದ್ರೆ ದಿನಕ್ಕೆ 650/- ಬಡ್ಡಿ ಆಮಿಷ…1.81 ಲಕ್ಷ ಪಂಗನಾಮ…ನಾಲ್ವರ ವಿರುದ್ದ FIR…

16,500/- ಹಾಕಿದ್ರೆ ದಿನಕ್ಕೆ 650/- ಬಡ್ಡಿ ಆಮಿಷ…1.81 ಲಕ್ಷ ಪಂಗನಾಮ…ನಾಲ್ವರ ವಿರುದ್ದ FIR…

  • Crime
  • August 24, 2025
  • No Comment
  • 90

ಮೈಸೂರು,ಆ24,Tv10 ಕನ್ನಡ

ಆಪ್ ಗೆ 16,500/- ರೂ ಹಾಕಿದ್ರೆ ದಿನಕ್ಕೆ 650/- ರೂ ಬಡ್ಡಿ ಬರುತ್ತದೆ ಎಂದು ನಂಬಿಸಿ ಇಡೀ ಕುಟುಂಬಕ್ಕೆ 1.81 ಲಕ್ಷ ಹಣಕ್ಕೆ ಪಂಗನಾಮ ಹಾಕಿದ ಪ್ರಕರಣ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಬಡೆಮಕಾನ್ ನ ನೂರ್ ಜಾನ್ ಸೇರಿದಂತೆ ಕುಟುಂಬದ 11 ಮಂದಿಗೆ ಉಂಡೆನಾಮ ಹಾಕಲಾಗಿದೆ.ಬಡೆಮಕಾನ್ ನಿವಾಸಿಗಳಾದ ರೊಮಾನಾ,ಮೆಹಬೂಬ್,ಅಜ್ಮಲ್ ಹಾಗೂ ಇಮ್ರಾನ್ ವಿರುದ್ದ ವಂಚನೆ ಪ್ರಕರಣ ದಾಖಲಿಸಲಾಗಿದೆ.

HUGE ಎಂಬ ಆಪ್ ಗೆ 16,500/- ರೂ ಹಾಕಿದ್ರೆ ಪ್ರತಿದಿನ 650/- ರೂ ಬಡ್ಡಿ ಬರುತ್ತದೆ ಎಂದು ನಾಲ್ವರು ಆರೋಪಿಗಳು ನೂರ್ ಜಾನ್ ಗೆ ನಂಬಿಸಿದ್ದಾರೆ.ಮೊದಲು ನೂರ್ ಜಾನ್ ಹಾಗೂ ಇವರ ಪತಿ ಹಣ ಹೂಡಿದ್ದಾರೆ.ಒಂದು ವಾರದ ನಂತರ ಬಡ್ಡಿ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ನಂಬಿಸಿದ್ದಾರೆ.ಹಣ ಹೂಡಿಕೆ ಮಾಡಿಸಿದ್ರೆ ಕಮೀಷನ್ ಸಹ ಬರುತ್ತದೆ ಎಂದು ನಂಬಿಸಿದ್ದಾರೆ.ಇದನ್ನ ನಂಬಿದ ನೂರ್ ಜಾನ್ ತನ್ನ ಕುಟುಂಬಸ್ಥರು ಹಾಗೂ ಪರಿಚಯಸ್ಥರಿಂದ ಸುಮಾರು 11 ಮಂದಿಯಿಂದ 1.81 ಲಕ್ಷ. ಹಣ ಹೂಡಿಸಿದ್ದಾರೆ.ಒಂದು ವಾರದ ನಂತರ HUGE ಆಪ್ ನಿಂದ ಹಣ ಡ್ರಾ ಮಾಡಲು ಮುಂದಾದಾಗ ಆಪ್ ಓಪನ್ ಆಗಿಲ್ಲ.ಈ ಬಗ್ಗೆ ರುಮಾನಾ ರವರನ್ನ ಪ್ರಶ್ನಿಸಿದಾಗ ಆಪ್ ಕ್ಲೋಸ್ ಆದ್ರೆ ನಾವೇನು ಮಾಡೋಕ್ಕೆ ಆಗಲ್ಲ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.ವಂಚನೆಗೆ ಒಳಗಾದ 11 ಮಂದಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *