
RTI ನ್ಯೂಸ್ ಪೇಪರ್ ಮುಖ್ಯಸ್ಥನಿಂದ ಸರ್ಕಾರಿ ವೈದ್ಯಾಧಿಕಾರಿಗೆ ಬ್ಲಾಕ್ ಮೇಲ್…25 ಲಕ್ಷಕ್ಕೆ ಡಿಮ್ಯಾಂಡ್…ಇಬ್ಬರ ವಿರುದ್ದ FIR…ಓರ್ವ ಅಂದರ್…
- Crime
- August 27, 2025
- No Comment
- 193
RTI ನ್ಯೂಸ್ ಪೇಪರ್ ಮುಖ್ಯಸ್ಥನಿಂದ ಸರ್ಕಾರಿ ವೈದ್ಯಾಧಿಕಾರಿಗೆ ಬ್ಲಾಕ್ ಮೇಲ್…25 ಲಕ್ಷಕ್ಕೆ ಡಿಮ್ಯಾಂಡ್…ಇಬ್ಬರ ವಿರುದ್ದ FIR…ಓರ್ವ ಅಂದರ್…
ಮೈಸೂರು,ಆ27,Tv10 ಕನ್ನಡ
ಮೈಸೂರಿನ ತಿಲಕ್ ನಗರದಲ್ಲಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿ ಅಕೌಂಟ್ಸ್ ಆಫೀಸರ್ ಗೆ RTI ನ್ಯೂಸ್ ಪೇಪರ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಬೆದರಿಸಿ 25 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.ಹಣ ನೀಡದಿದ್ದಲ್ಲಿ ಆರೋಗ್ಯ ಸಚಿವರಿಗೆ,ಲೋಕಾಯುಕ್ತಕ್ಕೆ ದೂರು ನೀಡಿ ನಿಮ್ಮ ವಿರುದ್ದ ಪ್ರತಿಭಟಿಸಿ ಮಾನಹಾನಿ ಮಾಡಿ ಕೊನೆಗೆ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಈ ಸಂಭಂಧ RTI ನ್ಯೂಸ್ ಪೇಪರ್ ನ ಹರೀಶ್ @ರಾಮು ಹಾಗೂ ಪ್ರತಾಪ್ ಎಂಬುವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರತಾಪ್ ಎಂಬಾತನ ಬಂಧನವಾಗಿದ್ದು ಹರೀಶ್ @ ರಾಮು ತಲೆಮರೆಸಿಕೊಂಡಿದ್ದಾನೆ.ಈ ಹಿಂದೆ ಹುಣಸೂರಿನಲ್ಲಿ ಹರೀಶ್ @ರಾಮು ವಿರುದ್ದ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿಯ ಅಂಕಿತ ಅಧಿಕಾರಿ ಡಾ.ಕಾಂತರಾಜು ಎಂಬುವರೇ ಪ್ರಕರಣ ದಾಖಲಿಸಿದವರು.ಸುಮಾರು ಮೂರು ತಿಂಗಳ ಹಿಂದೆ ಆರೋಪಿಗಳು ಡಾ.ಕಾಂತರಾಜು ರವರನ್ನ ಸಂಪರ್ಕಿಸಿ ತಮ್ಮ ಹಾಗೂ ತಮ್ಮ ಪತ್ನಿಯ ಚಲನವಲನಗಳನ್ನ ಸ್ಟಿಂಗ್ ಅಪರೇಷನ್ ಮಾಡಿ ವಿಡಿಯೋ ಮತ್ತು ದಾಖಲೆಗಳನ್ನ ಸಂಗ್ರಹಿಸಿದ್ದೇವೆ.ಸಿದ್ದಾರ್ಥ ನಗರದಲ್ಲಿ ಇರುವ ನಿಮ್ಮ ಮಡದಿಯ ಕ್ಲಿನಿಕ್ ನಲ್ಲಿ ಮಹಿಳಾ ರೋಗಿಗಳಿಗೆ ಪರೀಕ್ಷಿಸುವಾಗ ವಿಡಿಯೋಗಳನ್ನ ಮಾಡಿದ್ದೇವೆ.ನಿಮ್ಮ ಎಲ್ಲಾ ಕಾರ್ಯಚಟುವಟಿಕೆಗಳ ವಿವರ ನಮ್ಮ ಬಳಿ ಇದೆ.ಇವುಗಳನ್ನ ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರಿಸುತ್ತೇವೆ,ನಿಮ್ಮ ವಿರುದ್ದ ಪ್ರತಿಭಟನೆ ಮಾಡುತ್ತೇವೆ,ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸುತ್ತೇವೆ,ಆರೋಗ್ಯ ಸಚಿವರಿಗೆ ದೂರು ನೀಡಿ ಸಸ್ಪೆಂಡ್ ಮಾಡಿಸುತ್ತೇವೆ.ನಿಮ್ಮ ಕುಟುಂಬ ಹಾಗೂ ರೋಗಿಗಳ ಮುಂದೆ ಅವಮಾನ ಮಾಡುತ್ತೇವೆ.ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ.ನಿರಂತರವಾಗಿ ಕಿರುಕುಳ ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. 25 ಲಕ್ಷ ನೀಡಿದ್ರೆ ನಿಲ್ಲಿಸುವುದಾಗಿ ಡಿಮ್ಯಾಂಡ್ ಮಾಡಿದ್ದಾರೆ.ಹಣ ನೀಡಲು 25-08-2025 ರಂದು ಡೆಡ್ ಲೈನ್ ಸಹಾ ನೀಡಿ ಹೂಟಗಳ್ಳಿ ಸಿಗ್ನಲ್ ಲೈಟ್ ಬಳಿ ಕರೆಸಿಕೊಂಡು ಬೆದರಿಕೆ ಹಾಕಿದ್ದಾರೆ.ಆರೋಪಿಗಳ ಕಿರುಕುಳಕ್ಕೆ ಬೇಸತ್ತ ಡಾ.ಕಾಂತರಾಜು ವಿಜಯನಗರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಹರೀಶ್ @ ರಾಮು ಹಾಗೂ ಪ್ರತಾಪ್ ವಿರುದ್ದ FIR ದಾಖಲಿಸಿಕೊಂಡ ಪೊಲೀಸರು ಪ್ರತಾಪ್ ನ ಅರೆಸ್ಟ್ ಮಾಡಿದ್ದಾರೆ.ಹರೀಶ್@ರಾಮು ತಲೆಮರೆಸಿಕೊಂಡಿದ್ದಾನೆ…