
ಕಡಿಮೆ ದರದಲ್ಲಿ ಸಿಮೆಂಟ್,ಕಬ್ಬಿಣ ಕೊಡಿಸುವ ಆಮಿಷ…2.30 ಕೋಟಿ ಪಂಗನಾಮ…ರಾತ್ರೋ ರಾತ್ರಿ ಎಸ್ಕೇಪ್…ದಂಪತಿ ವಿರುದ್ದ FIR…
- TV10 Kannada Exclusive
- August 28, 2025
- No Comment
- 24
ಮೈಸೂರು,ಆ28,Tv10 ಕನ್ನಡ
ಕಡಿಮೆ ದರದಲ್ಲಿ ಸಿಮೆಂಟ್ ಹಾಗೂ ಕಬ್ಬಿಣ ಕೊಡಿಸುವುದಾಗಿ ನಂಬಿಸಿದ ದಂಪತಿ 16 ಮಂದಿಗೆ 2,30,85,000/- ವಂಚಿಸಿ ಪರಾರಿಯಾದ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.ಈ ಸಂಬಂಧ ವಂಚನೆಗೆ ಒಳಗಾದ 16 ಮಂದಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ರಾತ್ರೋ ರಾತ್ರಿ ದಂಪತಿ ಮನೆ ಹಾಗೂ ಮಳಿಗೆ ಬೀಗ ಹಾಕಿ ಎಸ್ಕೇಪ್ ಆಗಿದೆ.
ಶ್ರೀರಾಂಪುರದಲ್ಲಿರುವ ಶುಭಂ ಸ್ಟೀಲ್ಸ್ ಅಂಡ್ ಸಿಮೆಂಟ್ಸ್ ಮತ್ತು ಬಿಲ್ಡರ್ಸ್ ಸಂಸ್ಥೆಯ ಮಾಲೀಕರಾದ ಮೇನಕ ಪ್ರಿಯಾ ಹಾಗೂ ಪತಿ ಶಣ್ಮುಗ ಮುತ್ತುಸ್ವಾಮಿ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಸಧ್ಯ ದಂಪತಿ ತಲೆ ಮರೆಸಿಕೊಂಡಿದ್ದಾರೆ.ಕೆ.ಆರ್.ಮೊಹಲ್ಲ ಬಸವೇಶ್ವರ ರಸ್ತೆಯ ನಿವಾಸಿ ಬಿಲ್ಡರ್ ಶರತ್ ಸೇರಿದಂತೆ 16 ಮಂದಿ ವಂಚನೆಗೆ ಒಳಗಾಗಿದ್ದಾರೆ.ಶಣ್ಮುಖ ಮುತ್ತುಸ್ವಾಮಿ ಆಕಸ್ಮಿಕವಾಗಿ ಶರತ್ ಗೆ ಪರಿಚಯ ಆಗಿದ್ದಾರೆ.ಶುಭಂ ಸ್ಟೀಲ್ಸ್ ಮತ್ತು ಸಿಮೆಂಟ್ಸ್ ನನ್ನ ಪತ್ನಿ ಮೇನಕಾ ಪ್ರಿಯಾ ಮಾಲೀಕಳು ಎಂದು ತಿಳಿಸಿದ್ದಾರೆ.ಕಬ್ಬಿಣ ಹಾಗೂ ಸಿಮೆಂಟ್ ಗಳನ್ನ ಕಡಿಮೆ ಬೆಲೆಗೆ ತಮಿಳುನಾಡಿನಿಂದ ತರಿಸಿಕೊಡುವುದಾಗಿ ಶರತ್ ಗೆ ನಂಬಿಸಿದ್ದಾನೆ.ಶಣ್ಮುಖಸ್ವಾಮಿ ಮಾತನ್ನ ನಂಬಿದ ಶರತ್ ಹಂತ ಹಂತವಾಗಿ ಲಕ್ಷಾಂತರ ಹಣ ಕೊಟ್ಟಿದ್ದಾರೆ.ನಂತರ ಇವರ 15 ಸ್ನೇಹಿತರಿಂದಲೂ ಹಂತಹಂತವಾಗಿ 2,30,85,000/- ರೂಗಳನ್ನ ಕೊಡಿಸಿದ್ದಾರೆ.ಹಣ ಕೊಟ್ಟು ತಿಂಗಳುಗಳು ಉರುಳಿದರೂ ಕಬ್ಬಿಣ ಸಿಮೆಂಟ್ ಬಂದಿಲ್ಲ.ತಮಿಳುನಾಡಿನ ಕಂಪನಿಯಲ್ಲಿ ಬುಕ್ ಮಾಡಿರುವುದಾಗಿ ಸುಳ್ಳು ಹೇಳಿಕೊಂಡೇ ಷಣ್ಮುಖಮುತ್ತುಸ್ವಾಮಿ ನಂಬಿಸಿದ್ದಾರೆ.ಮೂರು ದಿನಗಳ ಹಿಂದೆ ಷಣ್ಮುಖ ಮುತ್ತುಸ್ವಾಮಿ ಮನೆಗೆ ಶರತ್ ಹೋದಾಗ ರಾತ್ರೋ ರಾತ್ರಿ ಮನೆ ಖಾಲಿ ಮಾಡಿರುವುದು ಗೊತ್ತಾಗಿದೆ.ಅಂಗಡಿಗೂ ಬೀಗ ಬಿದ್ದಿದೆ.ತಾವು ವಂಚನೆಗೆ ಒಳಗಾಗಿರುವುದ ಖಚಿತವಾದ ನಂತರ ಶರತ್ ಹಾಗೂ 15 ಸ್ನೇಹಿತರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…