
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ಹಿಂಪಡೆಯಿರಿ…ಮೈಸೂರಿನಲ್ಲಿ ಪ್ರತಿಭಟನೆ
- TV10 Kannada Exclusive
- August 30, 2025
- No Comment
- 37
ಮೈಸೂರು,ಆ29,Tv10 ಕನ್ನಡ
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ಮಾಡಿರುವ ವಿಚಾರ ದಿನೇ ದನೇ ವಿರೋಧ ಹೆಚ್ಚಾಗುತ್ತಿದೆ.ಆಯ್ಕೆ ಹಿಂಪಡೆಯುವಂತೆ ಅಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆದಿದೆ.
ಹಳೇ ಜಿಲ್ಲಾಧಿಕಾರಿ ಬಳಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.
ತಾಯಿ ಚಾಮುಂಡೇಶ್ವರಿಯನ್ನ ನವರಾತ್ರಿಯ 9 ದಿನಗಳ ಕಾಲ ಆರಾಧಿಸುವ ಹಿಂದೂಗಳು ಈ ಆಯ್ಕೆಯನ್ನ ವಿರೋಧಿಸುತಿದ್ದೇವೆ.
ಕನ್ನಡಾಂಬೆ ತಾಯಿ ಭುವನೇಶ್ವರಿಯ ಬಗ್ಗೆ, ಅರಿಶಿನ ಕುಂಕುಮದ ಬಗ್ಗೆ, ಕನ್ನಡ ಭಾಷೆಯ ವೈಶಾಲ್ಯತೆಯ ಬಗ್ಗೆ, ನಾಡಿನ ಸಂಸ್ಕೃತಿಯ ಬಗ್ಗೆ ಸಂಕುಚಿತವಾಗಿ ಮಾತನಾಡಿದ್ದಾರೆ.
ಕನ್ನಡಿಗರ ಭಾವನೆಗೆ ಬಾನು ಮುಷ್ತಾಕ್ ಧಕ್ಕೆ ತಂದಿರುತ್ತಾರೆ.ದೇಶದ ಸಂಸ್ಕೃತಿ, ಆಚಾರ ವಿಚಾರಗಳಿಗೆ ಗೌರವ ಕೊಡದೆ ಇರುವವರಿಗೆ ನಮ್ಮ ಧಾರ್ಮಿಕ ನಾಡಹಬ್ಬವನ್ನು ಉದ್ಘಾಟಿಸುವ ಅರ್ಹತೆ ಇಲ್ಲ.ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಭಾನು ಮುಷ್ತಾಕ್ ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿ, ಪುಷ್ಪಾರ್ಚನೆ ಮಾಡಿ ಮಂಗಳಾರತಿ ತೆಗೆದುಕೊಳ್ಳುತ್ತಾರ..?
ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣ ಬಾನುಮುಸ್ತಾಕ್ ಆಯ್ಕೆಯನ್ನ ಹಿಂಪಡೆಯಬೇಕು.
ನಮ್ಮ ರಾಜ್ಯದಲ್ಲಿ ಅನೇಕ ಹಿರಿಯ ಘಟಾನುಘಟಿ ಸಾಧಕರುಗಳಿದ್ದಾರೆ.
ಮಾಜಿ ಪ್ರಧಾನಿ, ಹೆಚ್ ಡಿ ದೇವೇಗೌಡ, ಕನ್ನಡದ ಕಟ್ಟಾಳು ಹೋರಾಟಗಾರ ವಾಟಾಳ್ ನಾಗರಾಜ್, ಪದ್ಮಭೂಷಣ ಪ್ರಶಸ್ತಿ ಪಡೆದ ನಟ ಅನಂತನಾಗ್, ಸಾಲುಮರದ ತಿಮ್ಮಕ್ಕ, ಸಮಾಜ ಸೇವಕಿ ಕೊಡುಗೈದಾನಿ ಇನ್ಫೋಸಿಸ್ ನ ಸುಧಾ ಮೂರ್ತಿ, ಭೂಕರ್ ಪ್ರಶಸ್ತಿ ಬರಲು ಮುಖ್ಯ ಕಾರಣಕರ್ತರಾಗಿರುವ ಅನುವಾದಕಿ ದೀಪ ಬಸ್ತಿ ಅವರನ್ನ ಆಯ್ಕೆ ಮಾಡಿ.
ಮೈಸೂರಿನಲ್ಲಿ ಕರ್ನಾಟಕ ಸೇನಾ ಪಡೆ ಒತ್ತಾಯಿಸಿದೆ…