
ಬೈಕ್ ಹಾಗೂ KSRTC ಬಸ್ ನಡುವೆ ಡಿಕ್ಕಿ…ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು…
- Crime
- August 30, 2025
- No Comment
- 27
ಮಂಡ್ಯ,ಆ29,Tv10 ಕನ್ನಡ
ಬೈಕ್ ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಅಂಚೇಬೀರನಹಳ್ಳಿ ಬಳಿಯ ಮೈಸೂರು-ಅರಸೀಕೆರೆ ಹೆದ್ದಾರಿಯಲ್ಲಿ ನಡೆದಿದೆ.
ಕಡೆಹೆಮ್ಮಿಗೆ ಗ್ರಾಮದ ಉಮೇಶ್(24), ಗಣಸಿ ಗ್ರಾಮದ ದಿನೇಶ್ (24) ಮೃತರು.ಇಬ್ಬರು ಬೈಕ್ ನಲ್ಲಿ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದರು.
ಈ ವೇಳೆ ಮೈಸೂರು ಕಡೆಗೆ ಬರುತ್ತಿದ್ದ KSRTC ಬಸ್ ಡಿಕ್ಕಿ ಹೊಡೆದಿದೆ.
ಬಸ್ ಚಾಲಕನ ಅಜಾಗರೂಕತೆಯಿಂದ ಸಾವು ಎಂದು ಆರೋಪ ಮಾಡಲಾಗಿದೆ.
ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…