ಆಸ್ತಿ ಹಂಚಿಕೆ ವಿಚಾರ…ಸಹೋದರರ ನಡುವೆ ಗಲಾಟೆ ಅಣ್ಣನ ಕೊಲೆಯಲ್ಲಿ ಅಂತ್ಯ…
- CrimeTV10 Kannada Exclusive
- September 1, 2025
- No Comment
- 81
ಮೈಸೂರು,ಸೆ1,Tv10 ಕನ್ನಡ
ಆಸ್ತಿ ಹಂಚಿಕೆ ವಿಚಾರದಲ್ಲಿ ತಮ್ಮನೇ ಅಣ್ಣನನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋರೆ ಆನಂದೂರು ಗ್ರಾಮದಲ್ಲಿ ನಡೆದಿದೆ. ಅಣ್ಣ ಮಹೇಶ್ (45) ಮೃತ ದುರ್ದೈವಿ. ತಮ್ಮ ರವಿ (43) ಕೊಲೆ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ಈತ ತನ್ನ ತಂದೆ, ಕೃಷ್ಣೇಗೌಡ, ಅತ್ತಿಗೆ ಲಕ್ಷಿ ಮೇಲೂ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.
ತಂದೆ ಕೃಷ್ಣೇಗೌಡ ಇತ್ತೀಚೆಗೆ ಅಣ್ಣ ತಮ್ಮಂದಿರಿಗೆ ಜಮೀನು ಹಂಚಿಕೆ ಮಾಡಿದ್ರು.6 ಗುಂಟೆ ಜಾಗವನ್ನು ಹಿರಿಯ ಪುತ್ರ ಮಹೇಶ್ ಹೆಚ್ಚುವರಿಯಾಗಿ ಬರೆದಿದ್ದರೆಂದು ಹೇಳಲಾಗಿದೆ. ಇದರಿಂದ ತಮ್ಮ ರವಿ ಸೋಮವಾರ ಏಕಾಏಕಿ ಬಂದು ಗಲಾಟೆ ಮಾಡಿದ್ದಾನೆ.ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಹರಿತವಾದ ಮಚ್ಚಿನಿಂದ ತಲೆಯನ್ನು ಕೊಚ್ಚಿ ಹಾಕಿದ್ದಾನೆ. ತಡೆಯಲು ಬಂದ ತಂದೆ, ಅತ್ತಿಗೆ ಮೇಲೂ ಆಯುಧದಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದಾನೆ.
ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…