ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ…2 ಕೋಟಿ ಮೌಲ್ಯದ ನಕಲಿ ಹನ್ಸ್ ವಶ…ಮೂವರ ವಿರುದ್ದ FIR
- Crime
- September 2, 2025
- No Comment
- 166
ಹೆಚ್.ಡಿ.ಕೋಟೆ,ಸೆ2,Tv10 ಕನ್ನಡ
ಮೈಸೂರು ಜಿಲ್ಲಾ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 2 ಕೋಟಿ ನಕಲಿ ಹನ್ಸ್ ವಶಪಡಿಸಿಕೊಳ್ಳಲಾಗಿದೆ.
ಹೆಚ್.ಡಿ ಕೋಟೆಯ ಮದ್ದೂರು ಪಟ್ಟಣದಲ್ಲಿ ನಕಲಿ ಹನ್ಸ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಮೂವರ ವಿರುದ್ದ ಪ್ರಕರಣ ದಾಖಲಿಸಿ ಎರಡು ಕೋಟಿಗೂ ಅಧಿಕ ಮೌಲ್ಯದ ಹನ್ಸ್ ವಶಕ್ಕೆ ಪಡೆದಿದ್ದಾರೆ.
ಬೆಟ್ಟಹಳ್ಳಿ ಸರ್ವೇ 1/17, 18 ರಲ್ಲಿ ನಕಲಿ ಹನ್ಸ್ ತಯಾರಿಕಾ ಘಟಕದಲ್ಲಿ ನಕಲಿ ಹನ್ಸ್ ತಯಾರಿಸಲಾಗುತ್ತಿತ್ತು.ಖಚಿತ ಮಾಹಿತಿ ಆಧರಿಸಿ ಹೆಚ್.ಡಿ.ಕೋಟೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ಶೈನ್ ಪ್ರಸಾದ್, ಪ್ರಭುಸ್ವಾಮಿ ಹಾಗಣು ಅಶ್ವಿನಿ ಕೆ.ಶೈನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಸ್ಥಳದಲ್ಲಿ 75 ಲಕ್ಷ ಮೌಲ್ಯದ 3 ಹನ್ಸ್ ಪ್ಯಾಕೆಟ್,ಹನ್ಸ್ ತಯಾರು ಮಾಡುವ ಮಿಷನ್ ಗಳು,16 ಸಾವಿರ ಮೌಲ್ಯದ ಚೀಲ, ಹೊಲಿಗೆ ಹಾಕುವ 2 ಮಿಷನ್ , 96 ಸಾವಿರದ 4 ಹನ್ಸ್ ಪ್ಯಾಕೇಜ್ ಚೀಲಗಳು, ಹಳೆಯ ಹನ್ಸ್ ಪ್ಯಾಕೆಟ್ ಚೀಲಗಳು 146 (ಮೌಲ್ಯ 17 ಲಕ್ಷದ 57 ಸಾವಿರ), 20 ಲೀಟರ್ ಅಳತೆಯ ಟಿಪಿಆರ್ ಕೆಮಿಕಲ್ ಕ್ಯಾನ್ (ಮೌಲ್ಯ 8.40 ಲಕ್ಷ), ಲೇಬಲ್ ರೋಲ್ ,ಸಣ್ಣ ಸಣ್ಣ ಪ್ಯಾಲೆಟ್ ರೋಲ್, 2 ಲಕ್ಷ ಮೌಲ್ಯದ, ಕೆಂಪು ಬಣ್ಣದ ಹನ್ಸ್ ಪ್ಯಾಕೆಟ್ ಪೇಪರ್ 6 ಚೀಲ, ನೀಲಿ ಬಣ್ಣದ ಹನ್ಸ್ ಪ್ಯಾಕೆಟ್ ತುಂಬವ ಎರಡು ಪ್ಲಾಸ್ಟಿಕ್ ಚೀಲ (87 ಸಾವಿರ),ಸೇರಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ…