ಕುಡಿಯಲು ಹಣ ನೀಡದ ಯುವಕನ ತಲೆ ಕೂದಲು ಕತ್ತರಿಸಿ,ಬಸ್ಕಿ ಹೊಡೆಸಿ,ಕೊಲೆ ಬೆದರಿಕೆ…ಮೂವರ ವಿರುದ್ದ FIR…
- Crime
- September 2, 2025
- No Comment
- 249
ಕುಡಿಯಲು ಹಣ ನೀಡದ ಯುವಕನ ತಲೆ ಕೂದಲು ಕತ್ತರಿಸಿ,ಬಸ್ಕಿ ಹೊಡೆಸಿ,ಕೊಲೆ ಬೆದರಿಕೆ…ಮೂವರ ವಿರುದ್ದ FIR…
ಮೈಸೂರು,ಸೆ2,Tv10 ಕನ್ನಡ
ಕುಡಿಯಲು ಹಣ ನೀಡದ ಯುವಕನ ಮೇಲೆ ಮೂವರ ತಂಡ ದಾಳಿ ನಡೆಸಿ ತಲೆ ಕೂದಲು ಕಟ್ ಮಾಡಿ ಬಸ್ಕಿ ಹೊಡೆಸಿ ಬಲವಂತವಾಗಿ ಜೇಬಿನಿಂದ ಒಂದು ಸಾವಿರ ಕಿತ್ತು ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಸ್ಜಿದ್ ಬ್ಲಾಕ್ ನ ಮೊಹಮದ್ ಸಾಕ್ಲೇನ್ ಹಣ ಕಳೆದುಕೊಂಡ ಯುವಕ.ನವಾಜ್,ಅಬ್ರಾರ್ ಹಾಗೂ ಸೇಠು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.
ಹೂವು ಕಟ್ಟುವ ಕೆಲಸ ಮಾಡುವ ಮಹಮದ್ ಸಾಕ್ಲೇನ್ ಕೆಲಸ ಮುಗಿಸಿ ರಾತ್ರಿ ಸುಮಾರು 11.30 ರಲ್ಲಿ ಮನೆಗೆ ತೆರಳುತ್ತಿದ್ದಾಗ ನವಾಜ್,ಅಬ್ರಾರ್ ಹಾಗೂ ಸೇಠ ಅಡ್ಡಗಟ್ಟಿ ಕುಡಿಯಲು ಹಣ ನೀಡುವಂತೆ ಧಂಕಿ ಹಾಕಿದ್ದಾರೆ.ಹಣ ನೀಡಲು ನಿರಾಕರಿಸಿದಾಗ ಇಬ್ಬರು ಮಹಮದ್ ಸಾಕ್ಲೇನ್ ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.ಮತ್ತೊಬ್ಬ ಬ್ಲೇಡ್ ತೆಗೆದು ಕೂದಲನ್ನ ಕಟ್ ಮಾಡಿ ನಂತರ ಬಲವಂತವಾಗಿ ಬಸ್ಕಿ ಹೊಡೆಸಿ ಜೇಬಿನಲ್ಲಿದ್ದ ಒಂದು ಸಾವಿರ ಹಣವನ್ನ ಕಸಿದು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಸಿ ಹಿಗ್ಗಮುಗ್ಗಾ ಥಳಿಸಿ ಪರಾರಿಯಾಗಿದ್ದಾರೆ.ಮೂವರು ಖದೀಮರಿಂದ ಬಿಡಿಸಿಕೊಂಡ ಮಹಮದ್ ಸಕ್ಲೇನ್ ಮನೆಗೆ ಬಂದು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಸಂಪೂರ್ಣ ಕೂದಲನ್ನ ತೆಗೆಸಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ…