ಜಾಮೀನು ನೀಡಲು ಬಂದ ವ್ಯಕ್ತಿ ಮೇಲೆ ಹಲ್ಲೆ…ನ್ಯಾಯಾಲಯದ ಆವರಣದಲ್ಲೇ ಘಟನೆ…ಇಬ್ಬರು ವಕೀಲರು ಸೇರಿದಂತೆ ನಾಲ್ವರ ವಿರುದ್ದ FIR…
- Crime
- September 2, 2025
- No Comment
- 86
ಜಾಮೀನು ನೀಡಲು ಬಂದ ವ್ಯಕ್ತಿ ಮೇಲೆ ಹಲ್ಲೆ…ನ್ಯಾಯಾಲಯದ ಆವರಣದಲ್ಲೇ ಘಟನೆ…ಇಬ್ಬರು ವಕೀಲರು ಸೇರಿದಂತೆ ನಾಲ್ವರ ವಿರುದ್ದ FIR…
ಮೈಸೂರು,ಸೆ2,Tv10 ಕನ್ನಡ
ಜಾಮೀನು ನೀಡಲು ಬಂದ ವ್ಯಕ್ತಿ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ನಡೆಸಿದ ಘಟನೆ ಕುರಿತಂತೆ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗದ್ದಿಗೆ ಬಳಿಯ ಮರಯ್ಯನಹುಂಡಿ ನಿವಾಸಿ ಕೆಂಡಗಣ್ಣಪ್ಪ ಎಂಬುವರೇ ಹಲ್ಲೆಗೆ ಒಳಗಾದವರು.ವಕೀಲರಾದ ರವಿ,ಸುರೇಶ್ ಹಾಗೂ ಇವರ ತಂದೆ ಶಿವಣ್ಣ ಹಾಗೂ ಸಹೋದರ ಕೆಂಡಗಣ್ಣ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.
ಮರಯ್ಯನಹುಂಡಿ ಗ್ರಾಮದ ನಾಗರಾಜ್ ಎಂಬುವರಿಗೆ ಜಾಮೀನು ನೀಡಲು ಕೆಂಡಗಣ್ಣಪ್ಪ ಹೊಸನ್ಯಾಯಾಲಯಕ್ಕೆ ಬಂದಿದ್ದರು.2 ನೇ ಜೆಎಂಎಫ್ ಸಿ ಬಾಗಿಲ ಬಳಿ ಜಯಣ್ಣ ಎಂಬುವರ ಜೊತೆ ನಿಂತಿದ್ದಾಗ ರವಿ ಹಾಗೂ ಸುರೇಶ್ ದಿಟ್ಟಿಸಿ ನೋಡಿದ್ದಾರೆ.ನಂತರ ಆವರಣದಲ್ಲೇ ಜೆರಾಕ್ಸ್ ಮಾಡುವ ಸ್ಥಳಕ್ಕೆ ಬಂದಾಗ ಎದುರಾದ ರವಿ ಹಾಗೂ ಸುರೇಶ್ ಜಾಮೀನು ನೀಡದಂತೆ ಒತ್ತಾಯಿಸಿದ್ದಲ್ಲದೆ ಏಕಾಏಕಿ ಕೆಂಡಗಣ್ಣಪ್ಪ ರವರ ಮೇಲೆ ಹಲ್ಲೆ ನಡೆಸಿದ್ದಾರೆ.ನಾವು ಲಾಯರ್ ಗಳು ಇದರಿಂದ ಹೊರಬರುವುದು ಗೊತ್ತು ಎಂದು ಧಂಕಿ ಹಾಕಿ ಹಲ್ಲೆ ನಡೆಸಿದ್ದಾರೆಂದು ಕೆಂಡಗಣ್ಣಪ್ಪ ದೂರಿನಲ್ಲಿ ದಾಖಲಿಸಿದ್ದಾರೆ.ಹಲ್ಲೆಗೆ ರವಿ ಹಾಗೂ ಸುರೇಶ್ ತಂದೆ ಶಿವಣ್ಣ ಹಾಗೂ ಸಹೋದರ ಕೆಂಡಗಣ್ಣ ಸಹಕರಿಸಿರುವುದಾಗಿ ಆರೋಪಿಸಿರುವ ಕೆಂಡಗಣ್ಣಪ್ಪ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ…