ಅಂಗಡಿ ಮಾಲೀಕನ ಜೊತೆ ಪತ್ನಿ ಅಕ್ರಮ ಸಂಬಂಧ…ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ ಪ್ರೇಮಿಗಳು…ಕಳ್ಳತನ ಆರೋಪದ ಮೇಲೆ ಜೈಲಿಗೆ ಕಳಿಸುವುದಾಗಿ ಪತಿಗೆ ಬೆದರಿಕೆ…ಚಿನ್ನಾಭರಣ,ಮನೆ ಪತ್ರಗಳ ಜೊತೆ ಪತ್ನಿ ಎಸ್ಕೇಪ್
- CrimeTV10 Kannada Exclusive
- September 2, 2025
- No Comment
- 274
ಅಂಗಡಿ ಮಾಲೀಕನ ಜೊತೆ ಪತ್ನಿ ಅಕ್ರಮ ಸಂಬಂಧ…ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ ಪ್ರೇಮಿಗಳು…ಕಳ್ಳತನ ಆರೋಪದ ಮೇಲೆ ಜೈಲಿಗೆ ಕಳಿಸುವುದಾಗಿ ಪತಿಗೆ ಬೆದರಿಕೆ…ಚಿನ್ನಾಭರಣ,ಮನೆ ಪತ್ರಗಳ ಜೊತೆ ಪತ್ನಿ ಎಸ್ಕೇಪ್…
ಮೈಸೂರು,ಸೆ2,Tv10 ಕನ್ನಡ
ಅಂಗಡಿ ಮಾಲೀಕನ ಜೊತೆ ಪತ್ನಿ ಅಕ್ರಮ ಸಂಬಂಧ ಬೆಳೆಸಿ ಪತಿಗೆ ಬೆದರಿಕೆ ಹಾಕಿ ಮನೆ ದಾಖಲೆ ಪತ್ರ ಹಾಗೂ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಘಟನೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗರಡಿಕೇರಿಯಲ್ಲಿ ಬೆಳಕಿಗೆ ಬಂದಿದೆ.ಕಳ್ಳ ಪ್ರೇಮಿಗಳನ್ನ ಪತ್ತೆಹಚ್ಚಿ ತನಗೆ ಕಾನೂನು ರೀತಿ ಕ್ರಮ ಕೈಗೊಂಡು ನ್ಯಾಯ ದೊರಕಿಸಬೇಕೆಂದು ಪತಿ ಲಷ್ಕರ್ ಠಾಣಾ ಪೊಲೀಸರ ಮೊರೆ ಹೋಗಿದ್ದಾರೆ.ಈ ಸಂಭಂಧ ಪತ್ನಿ,ಪ್ರಿಯಕರ ಹಾಗೂ ಇದಕ್ಕೆ ಸಹಕರಿಸಿದ ವ್ಯಕ್ತಿ ಮೇಲೆ ಪತಿ ಪ್ರಕರಣ ದಾಖಲಿಸಿದ್ದಾರೆ.
ಗರಡಿಕೇರಿಯ ಜಸ್ವಂತ್ ಸೋನಿ ರವರೇ ಪತ್ನಿಯಿಂದ ವಂಚನೆಗೆ ಒಳಗಾದವರು.ಪತ್ನಿ ಸುಶೀಲಾ,ಪ್ರಿಯಕರ ರಾಜೇಶ್ ಕುಮಾರ್ ಸೋನಿ ಹಾಗೂ ಸಹಕರಿಸಿದ ರಾಕೇಶ್ ಸೋನಿ ವಿರುದ್ದ ನೊಂದ ಪತಿ ಪ್ರಕರಣ ದಾಖಲಿಸಿದ್ದಾರೆ.
14 ವರ್ಷಗಳ ಹಿಂದೆ ಜಸ್ವಂತ್ ಸೋನಿ ಹಾಗೂ ಸುಶೀಲ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ರು.ಇಬ್ಬರು ಮಕ್ಕಳ ಸುಖಿ ಸಂಸಾರವಾಗಿತ್ತು.ಜಸ್ವಂತ್ ಸೋನಿ ರವರು ತಮ್ಮ ಅಣ್ಣ ರಾಜಕುಮಾರ್ ರವರ ಅಂಗಡಿಯಲ್ಲಿ ಗೋಲ್ಡ್ ಸ್ಮಿತ್ ಆಗಿ ಕೆಲಸ ಮಾಡ್ತಿದ್ರು.ಆಗಾಗ ಅಂಗಡಿಗೆ ರಾಜೇಶ್ ಕುಮಾರ್ ಭೇಟಿ ಕೊಡುತ್ತಿದ್ದರು.ನಂತರ ಜಸ್ವಂತ್ ಸೋನಿ ರವರು ರಾಜೇಶ್ ಕುಮಾರ್ ಸೋನಿ ರವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ್ರು.ಜಸ್ವಂತ್ ಸೋನಿ ಅಂಗಡಿಗೆ ಕೆಲಸಕ್ಕೆ ಬಂದಾಗ ರಾಜೇಶ್ ಕುಮಾರ್ ಸೋನಿ ರವರು ಜಸ್ವಂತ್ ಮನೆಗೆ ಹೋಗುತ್ತಿದ್ದರು.ಪತ್ನಿ ಹಾಗೂ ಅಂಗಡಿ ಮಾಲೀಕನ ಜೊತೆ ಅಕ್ರಮ ಸಂಬಂಧ ವಿಚಾರ ಪತಿಗೆ ಗೊತ್ತಾಗಿದೆ.ಇವರಿಬ್ಬರು ಕಳ್ಳಾಟ ಆಡುವ ಉದ್ದೇಶದಿಂದ ಜಸ್ವಂತ್ ರನ್ನ ಅಂಗಡಿ ಕೆಲಸಕ್ಕೆ ಹಾಕಿಕೊಂಡಿರುವ ವಿಚಾರವೂ ಖಚಿತವಾಯಿತು.ಅಕ್ರಮ ಸಂಬಂಧದ ಬಗ್ಗೆ ತಕರಾರು ಮಾಡಿದ್ರೆ ಚಿನ್ನ ಕಳುವು ಆರೋಪ ಹೊರೆಸಿ ಜೈಲಿಗೆ ಕಳಿಸುವುದಾಗಿ ಕಳ್ಳ ಪ್ರೇಮಿಗಳು ಬೆದರಿಕೆ ಹಾಕಿದ್ರು.ಈ ಮಧ್ಯೆ ಕೆಲವು ಗ್ರಾಹಕರು ಚಿನ್ನಾಭರಣ ತಯಾರಿಸಲು ಜಸ್ವಂತ್ ಸೋನಿಗೆ 350 ಗ್ರಾಂ ಚಿನ್ನ ಕೊಟ್ಟಿದ್ರು.ಗ್ರಾಹಕರ ಚಿನ್ನವನ್ನ ರಾಜೇಶ್ ಕುಮಾರ್ ಸೋನಿ ಅಂಗಡಿಯಲ್ಲಿ ಇಟ್ಟಿದ್ರು.ಈ ವೇಳೆ ಇದ್ದಕ್ಕಿದ್ದಂತೆ ರಾಜೇಶ್ ಅಂಗಡಿಗೆ ಬೀಗ ಹಾಕಿದ್ದಾರೆ.ಇದರ ಮಧ್ಯೆ ಪತ್ನಿ ಸುಶೀಲಾ ಮನೆಯಲ್ಲಿದ್ದ ದಾಖಲೆ ಪತ್ರಗಳು,ಚೆಕ್ ಬುಕ್,ಐಟಿ ಫೈಲ್ಸ್ ಹಾಗೂ 260 ಗ್ರಾಂ ಚಿನ್ನಾಭರಣಗಳ ಜೊತೆ ಪರಾರಿಯಾಗಿದ್ದಾರೆ.ರಾಜೇಶ್ ರವರ ಪರಿಚಯಸ್ಥರಾದ ರಾಕೇಶ್ ಸೋನಿ ಸಹಾಯದಿಂದ ಪತ್ನಿ ಸುಶೀಲಾ ರಾತ್ರೋ ರಾತ್ರಿ ಗುಜರಾತ್ ಗೆ ಎಸ್ಕೇಪ್ ಆಗಿದ್ದಾರೆ.ಈ ಬಗ್ಗೆ ಜಸ್ವಂತ್ ಸೋನಿ ದೂರು ನೀಡಲು ಮುಂದಾದಾಗ ಚೆಕ್ ಬೌನ್ಸ್ ಮಾಡುವುದಾಗಿ ಪ್ರೇಮಿಗಳು ಬೆದರಿಕೆ ಹಾಕಿದ್ದಾರೆ.ಕಳ್ಳ ಪ್ರೇಮಿಗಳಿಂದ ನೊಂದ ಪತಿ ಜಸ್ವಂತ್ ಸೋನಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪತ್ನಿ ಸುಶೀಲಾ ಪ್ರಿಯಕರ ರಾಜೇಶ್ ಕುಮಾರ್ ಸೋನಿ ಹಾಗೂ ರಾಕೇಶ್ ಕುಮಾರ್ ಸೋನಿ ವಿರುದ್ದ ಪ್ರಕರಣ ದಾಖಲಾಗಿದೆ…