KSRTC ಬಸ್ ಹರಿದು ವ್ಯಕ್ತಿ ಸಾವು…ಕೆ.ಆರ್.ಪೇಟೆ ಸರ್ಕಾರಿ ಬಸ್ ನಿಲ್ದಾಣದ ಬಳಿ ದುರ್ಘಟನೆ…
- Crime
- September 3, 2025
- No Comment
- 43
ಕೆ.ಆರ್.ಪೇಟೆ,ಸೆ3,Tv10 ಕನ್ನಡ
ಕೆಎಸ್ ಆರ್ ಟಿಸಿ ಬಸ್ ಹರಿದು ವ್ಯಕ್ತಿ ಮೃತಪಟ್ಟ ಘಟನೆ ಕೆ.ಆರ್.ಪೇಟೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ ನಡೆದಿದೆ.ಕೆ.ಆರ್.ಪೇಟೆ ತಾಲೂಕು ಬಳ್ಳೆಕೆರೆ ಗ್ರಾಮದ ನಿವಾಸಿ ಹರೀಶ್(35) ಮೃತ ದುರ್ದೈವಿ.ರಸ್ತೆ ಬದಿ ನಿಂತಿದ್ದ ಹರೀಶ್ ಮೇಲೆ
ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್
ಏಕಾಏಕಿ ಹರಿದ ಪರಿಣಾಮ ಹರೀಶದ ತೀವ್ರ ಗಾಯಗೊಂಡಿದ್ದರು.
ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…