ಅರೆಸ್ಟ್ ವಾರೆಂಟ್ ಆರೋಪಿ ವಶಕ್ಕೆ ಪಡೆಯಲು ಬಂದ ಮುಖ್ಯಪೇದೆ ಮೇಲೆ ಹಲ್ಲೆ…ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿಯನ್ನ ಚೇಸ್ ಮಾಡಿ ಹಿಡಿದ ಕಾಪ್…ಹಲ್ಲೆ ನಡೆಸಿದ ಆರೋಪಿ ಸೇರಿದಂತೆ ಮೂವರ ವಿರುದ್ದ FIR…

ಅರೆಸ್ಟ್ ವಾರೆಂಟ್ ಆರೋಪಿ ವಶಕ್ಕೆ ಪಡೆಯಲು ಬಂದ ಮುಖ್ಯಪೇದೆ ಮೇಲೆ ಹಲ್ಲೆ…ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿಯನ್ನ ಚೇಸ್ ಮಾಡಿ ಹಿಡಿದ ಕಾಪ್…ಹಲ್ಲೆ ನಡೆಸಿದ ಆರೋಪಿ ಸೇರಿದಂತೆ ಮೂವರ ವಿರುದ್ದ FIR…

  • Crime
  • September 7, 2025
  • No Comment
  • 629

ಮೈಸೂರು,ಸೆ7,Tv10 ಕನ್ನಡ

ಅರೆಸ್ಟ್ ವಾರೆಂಟ್ ಇದ್ದ ಆರೋಪಿಯನ್ನ ವಶಕ್ಕೆ ಪಡೆಯಲು ಬಂದ ಮುಖ್ಯಪೇದೆ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿಯನ್ನ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಹಿಡಿದ ಪ್ರಕರಣ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಟಿ.ನರಸೀಪುರ ಪೊಲೀಸ್ ಠಾಣೆಯ ಮುಖ್ಯಪೇದೆ ಮಂಜುನಾಥ್ ರವರೇ ಹಲ್ಲೆಗೆ ಒಳಗಾದವರು.ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿಯನ್ನ ಮಂಜುನಾಥ್ ರವರು ಚೇಸ್ ಮಾಡಿ ಹಿಡಿದಿದ್ದಾರೆ.ನಂತರ ಎಎಸ್ಸೈ ಒಬ್ಬರ ನೆರವಿನಿಂದ ಆರೋಪಿಯನ್ನ ನಜರಬಾದ್ ಪೊಲೀಸ್ ಠಾಣೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಸಂಭಂಧ ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ಮಾಲೀಕ ವಿಜಯೇಂದ್ರ,ಇವರ ಸಹಚರ ಲೋಕೇಶ್ ಹಾಗೂ ಇವರ ಕಾರಿನ ಚಾಲಕ ಭೀಮಯ್ಯ ಎಂಬುವರ ವಿರುದ್ದ ಮಂಜುನಾಥ್ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.

ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ನ ಮಾಲೀಕ ವಿಜಯೇಂದ್ರ ಹಾಗೂ ಇವರ ಸಹೋದರ ರಾಘವೇಂದ್ರ ಆರೋಪಿಗಳು.ಟಿ.ನರಸೀಪುರ add cj & jmfc ನ್ಯಾಯಾಲಯದಲ್ಲಿ ಇವರಿಬ್ಬರ ಮೇಲೆ ವೇದಕುಮಾರ್ ಎಂಬುವರು ದಾವೆ ಹೂಡಿದ್ದರು.ಚೆಕ್ ಬೌನ್ಸ್ ಪ್ರಕರಣಕ್ಕೆ ಆರೋಪಿಗಳು ಹಾಜರಾಗದ ಹಿನ್ನಲೆ ದಸ್ತಗಿರಿ ವಾರೆಂಟ್ ಹೊರಡಿಸಲಾಗಿತ್ತು.ಈ ಹಿನ್ನಲೆ ಮುಖ್ಯಪೇದೆ ಮಂಜುನಾಥ್ ರವರು ವೇದಕುಮಾರ್ ಜೊತೆ ಮೈಸೂರಿಗೆ ಆಗಮಿಸಿ ಛತ್ರಿ ಮರದ ಬಳಿ ಇರುವ ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ಬಳಿ ಕಾದಿದ್ದರು.ಆರೋಪಿ ವಿಜಯೇಂದ್ರ ಬಂದಾಗ ಅವರಿಗೆ ವಿಚಾರ ತಿಳಿಸಿ ಜೊತೆಗೆ ಬರುವಂತೆ ಹೇಳಿದ್ದಾರೆ.ಆಗ ವಿಜಯೇಂದ್ರ ರವರು ತಮ್ಮ ವಕೀಲರಿಗೆ ಮಾಹಿತಿ ತಿಳಿಸಿದ್ದಾರೆ.ವಕೀಲರು ನಾನೇ ಅವರನ್ನ ಕರೆತರುತ್ತೇನೆ ವಾರೆಂಟ್ ರೀಕಾಲ್ ಮಾಡಿಸುತ್ತೇನೆ ಎಂದು ತಿಳಿಸಿದಾಗ ಮಂಜುನಾಥ್ ಒಪ್ಪದೆ ಜೊತೆಗೆ ಬರುವಂತೆ ಮನವಿ ಮಾಡಿದ್ದಾರೆ.ಅದರಂತೆ ವಕೀಲರ ಜೊತೆ ವಿಜಯೇಂದ್ರ ತಮ್ಮ ಕಾರಿನಲ್ಲಿ ಪೇದೆ ಸಮೇತ ಕಾರಿನಲ್ಲಿ ಟಿ.ನರಸೀಪುರದತ್ತ ಹೊರಟಿದ್ದಾರೆ.ಸಿದ್ದಾರ್ಥನಗರ ಆರ್ಚ್ ಬಳಿ ಕಾರನ್ನ ನಿಲ್ಲಿಸುವಂತೆ ತಮ್ಮ ಚಾಲಕನಿಗೆ ಹೇಳಿ ತಕ್ಷಣ ಬಾಗಿಲು ತೆರೆದು ಲಲಿತಮಹಲ್ ರಸ್ತೆ ಮೂಲಕ ತಪ್ಪಿಸಿಕೊಂಡು ಓಡಿದ್ದಾರೆ.ಈ ವೇಳೆ ಮಂಜುನಾಥ್ ಹಿಂದೆ ಸುಮಾರು ದೂರ ಸಿನಮೀಯ ಶೈಲಿಯಲ್ಲಿ ಚೇಸ್ ಮಾಡಿ ಹರಸಾಹಸ ನಡೆಸಿ ವಿಜಯೇಂದ್ರ ರನ್ನ ಹಿಡಿದಿದ್ದಾರೆ.ಬಲವಂತವಾಗಿ ಕಾರನಲ್ಲಿ ಕೂರಿಸಿ ಕೆಎಸ್ ಆರ್ ಟಿಸಿ ಬಸ್ ಮೂಲಕ ಕರೆದೊಯ್ಯುವುದಾಗಿ ತಿಳಿಸಿದ್ದಾರೆ.ಅಷ್ಟರಲ್ಲಿ ವಿಜಯೇಂದ್ರ ತಮ್ಮ ಸಹಚರನೊಬ್ಬನಿಗೆ ಬರುವಂತೆ ಮೊಬೈಲ್ ಮೂಲಕ ತಿಳಿಸಿದ್ದಾರೆ.ಮುನ್ನೆಚ್ಚರಿಕೆಗಾಗಿ ನಜರಬಾದ್ ಪೊಲೀಸ್ ಠಾಣೆಯತ್ತ ಕಾರನ್ನ ಹೊರಡಿಸಿದ್ದಾರೆ.ಹೊಸ ಡಿಸಿ ಕಚೇರಿ ಬಳಿ ಬರುತ್ತಿದ್ದಂತೆಯೇ ವಿಜಯೇಂದ್ರ ರವರ ಸಹಚರ ಲೋಕೇಶ್ ಎಂಬಾತ ಬಂದು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾನೆ.ತಾನು ಪೊಲೀಸ್ ಎಂದು ಹೇಳಿದರೂ ಲೆಕ್ಕಿಸದೆ ವಕೀಲರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾನೆ. ಇದೇ ಸಮಯದಲ್ಲಿ ಎಎಸ್ಸೈ ಒಬ್ಬರು ಅದೇ ದಾರಿಯಲ್ಲಿ ಬರುತ್ತಿದ್ದುದನ್ನ ನೋಡಿದ ಮಂಜುನಾಥ್ ಸಹಾಯಕ್ಕೆ ಕರೆದಿದ್ದಾರೆ.ಎಎಸ್ಸೈ ರವರು ಮಂಜುನಾಥ್ ರವರ ನೆರವಿಗೆ ಬಂದು ವಿಜಯೇಂದ್ರ ರವರನ್ನ ಮತ್ತೆ ಕಾರಿನಲ್ಲಿ ಕೂರಿಸಿ ನಜರಬಾದ್ ಪೊಲೀಸ್ ಠಾಣೆಗೆ ಕಳಿಸಿದ್ದಾರೆ.ಇಡೀ ಘಟನೆಯನ್ನ ಮಂಜುನಾಥ್ ಜೊತೆಯಲ್ಲಿದ್ದ ದೂರುದಾರ ವೇದಕುಮಾರ್ ರವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ನಜರಬಾದ್ ಠಾಣೆಯಲ್ಲಿ ವಿಜಯೇಂದ್ರ ರವರ ಮೇಲೆ ಹಾಗೂ ಸಹಚರ ಲೋಕೇಶ್ ಮತ್ತು ಕಾರಿನ ಚಾಲಕ ಭೀಮಯ್ಯ ವಿರುದ್ದ ಪ್ರಕರಣ ದಾಖಲಿಸಿ ನಂತರ ಟಿ.ನರಸೀಪುರ ಠಾಣೆಗೆ ಸಿಬ್ಬಂದಿಗಳ ಸಮೇತ ಕಳಿಸಿದ್ದಾರೆ.ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಮೂವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮಂಜುನಾಥ್ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *