ಇಂದಿನಿಂದ ಎರಡು ದಿನ ಗಜಪಡೆಗೆ ಬೆಳಗಿನ ತಾಲೀಮಿಗೆ ಬ್ರೇಕ್…
- TV10 Kannada Exclusive
- September 6, 2025
- No Comment
- 132
ಮೈಸೂರು,ಸೆ6,Tv10 ಕನ್ನಡ
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ಇಂದಿನಿಂದ ಎರಡು ದಿನಗಳ ಕಾಲ ಬೆಳಗಿನ ತಾಲೀಮಿಗೆ ಬ್ರೇಕ್ ನೀಡಲಾಗಿದೆ.ಜಂಬೂಸವಾರಿಗಾಗಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಅಭಿಮನ್ಯು ಪಡೆಗೆ ಎರಡು ದಿನಗಳ ಕಾಲ ಬೆಳಗಿನ ತಾಲೀಮಿಗೆ ಬ್ರೇಕ್ ನೀಡಲಾಗಿದೆ.ಪ್ರತಿದಿನ ಸುಮಾರು 12 ಕಿಮೀ ಸಾಗುತ್ತಿರುವ
ಆನೆಗಳಿಗೆ ಇಂದು ವಿರಾಮ ಬೆಳಗಿನ ತಾಲೀಮಿಗೆ ವಿರಾಮ ನೀಡಲಾಗಿದೆ.ಎಂದಿನಂತೆ ಸಂಜೆ ವೇಳೆಯ ತಾಲೀಮು ಮುಂದುವರಿಯಲಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ಇಂದು ಸಂಜೆ 5:30 ಗಂಟೆಗೆ ತಾಲೀಮು
ಅರಮನೆಯಿಂದ ಆಯುರ್ವೇದಿಕ್ ವೃತ್ತದವರೆಗೂ ಸಾಗಲಿದೆ.
ಭಾನುವಾರ ಬೆಳಗ್ಗೆಯ ತಾಲೀಮಿಗೂ ಬ್ರೇಕ್ ನೀಡಿ ಸಂಜೆ 4 ಗಂಟೆಗೆ ತಾಲೀಮು
ಅರಮನೆಯಿಂದ ಬನ್ನಿಮಂಟಪದವರೆಗೂ ನಡೆಯಲಿದೆ ಎಂದು ತಿಳಿಸಿದ್ದಾರೆ.ಕಾಂಕ್ರೀಟ್ ರಸ್ತೆಯಲ್ಲಿ ಆನೆಗಳು ನಡೆಯುವುದರಿಂದ ಪಾದಗಳು ಸವೆದುಹೋಗುವ ಸಾಧ್ಯತೆಗಳು ಇರುವುದರಿಂದ ಇಂತಹ ನಿರ್ಧಾರ ಕೈಗೊಳ್ಳಲಾಗುತ್ಯದೆ.ವೈದ್ಯರ ಸಲಹೆ ಮೇರೆಗೆ ಬ್ರೇಕ್ ನೀಡಲಾಗಿದೆ ಎಂದು ತಿಳಿಸಿದ್ದಾರೆ…