ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಲು ಇಂದು ಕೊನೆ ದಿನ…ಠಾಣೆಗೆ ಮುಗಿಬಿದ್ದ ಜನ…ಗಡುವು ವಿಸ್ತರಣೆಗೆ ಮನವಿ…
- TV10 Kannada Exclusive
- September 12, 2025
- No Comment
- 96

ಮೈಸೂರು,ಸೆ12,Tv10 ಕನ್ನಡ
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಲು ಇಂದು ಕೊನೆ ದಿನ.ಶೇ50 % ಉಳಿತಾಯ ಮಾಡುವ ಉದ್ದೇಶದಿಂದ ಹಾಗೂ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ವಾಹನ ಮಾಲೀಕರು ಠಾಣೆಗಳಿಗೆ ಮುಗಿಬಿದ್ದಿದ್ದಾರೆ.ನೂರಾರು ಮಂದಿ ಸರದಿಯಲ್ಲಿ ನಿಂತು ದಂಡ ಪಾವತಿಗೆ ಕಾಯುತ್ತಿದ್ದಾರೆ.ಶೇ50 ಯೋಜನೆ ಗಡುವು ವಿಸ್ತರಣೆ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.ರಾಷ್ಟ್ರಪತಿಗಳು ಮೈಸೂರಿಗೆ ಭೇಟಿ ನೀಡಿದ ದಿನಗಳಲ್ಲಿ ಪೊಲೀಸರು ದಂಡ ಪಾವತಿಸಿಕೊಂಡಿಲ್ಲ.ಮೂರ್ನಾಲ್ಕು ದಿನ ಭದ್ರತೆ ಹೆಸರಿನಲ್ಲಿ ದಂಡ ಪಾವತಿಸಿಕೊಂಡಿಲ್ಲ.ಇದು ಸಾರ್ವಜನಿಕರ ತಪ್ಪಲ್ಲ.ಸಿಬ್ಬಂದಿಗಳ ಕೊರತೆಯಿಂದಾಗ ಹಣ ಪಾವತಿಸಿಕೊಂಡಿಲ್ಲ.ಸಾರ್ವಜನಿಕರದಲ್ಲದ ತಪ್ಪಿಗೆ ಇಂದು ಠಾಣೆಗಳ ಮುಂದೆ ಗಂಟೆಗಳ ಕಾಲ ಕ್ಯೂ ನಿಲ್ಲ ಬೇಕಾದ ಪರಿಸ್ಥಿತಿ ಬಂದಿದೆ.ಈ ಹಿನ್ನಲೆ ಸಂಭಂಧ ಪಟ್ಟ ಅಧಿಕಾರಿಗಳು ಅಂತಿಮ ಗಡುವನ್ನ ವಿಸ್ತರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.ಸಂಭಂಧಿಸಿದ ಮಂತ್ರಿಗಳು ಇತ್ತ ಗಮನ ಹರಿಸಬೇಕಿದೆ…