
50 ಸಾವಿರ ಪೌಂಡ್ ಗಿಫ್ಟ್ ಆಮಿಷ…10.90 ಲಕ್ಷ ಕಳೆದುಕೊಂಡ ಯೋಗ ಶಿಕ್ಷಕಿ…
- TV10 Kannada Exclusive
- September 27, 2025
- No Comment
- 65
ಮೈಸೂರು,ಸೆ27,Tv10 ಕನ್ನಡ
50 ಸಾವಿರ ಪೌಂಡ್ ಗಿಫ್ಟ್ ಕಳಿಸುವುದಾಗಿ ಆಮಿಷ ಒಡ್ಡಿದ ಇಂಗ್ಲೆಂಡ್ ಶಿಷ್ಯ ಯೋಗ ಗುರುವಿಗೆ 10.90 ಲಕ್ಷಕ್ಕೆ ಉಂಡೆನಾಮ ಹಾಕಿದ್ದಾನೆ.ಮೈಸೂರಿನ ವಿವೇಕಾನಂದ ನಗರದ ನಿವಾಸಿ ಯೋಗಶಿಕ್ಷಕಿಯಾಗಿರುವ ಸವಿತಾ ಕುಮಾರಿ ಹಣ ಕಳೆದುಕೊಂಡವರು.ಯೋಗತರಬೇತಿ ಬಗ್ಗೆ ಸುನಿತಾ ಕುಮಾರಿ ರವರು YOU TUBE,FASE BOOK ನಲ್ಲಿ ಜಾಹಿರಾತು ನೀಡಿದ್ದಾರೆ.ಎರಡು ತಿಂಗಳ ತರಬೇತಿ ಪಡೆಯುವುದಾಗಿ ಇಂಗ್ಲೆಂಡ್ ನ TOMMY ALISON ಎಂಬ ವ್ಯಕ್ತಿ ಸಂಪರ್ಕಿಸಿ ಎರಡು ತಿಂಗಳ ತರಬೇತಿಗಾಗಿ ಸೇರ್ಪಡೆಯಾಗಿದ್ದಾನೆ.ತರಬೇತಿ ಶುಲ್ಕ ಕೇಳಿದಾಗ ತಾನು ಜರ್ಮಿನಿ ಪ್ರಜೆಯಾಗಿರುವುದರಿಂದ ಬೇರೆ ದೇಶದ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಗಿಫ್ಟ್ ಹಾಗೂ 50 ಸಾವಿರ ಪೌಂಡ್ ಕಳಿಸುತ್ತೇನೆ ಕಸ್ಟಂ ನಲ್ಲಿ ಸ್ವಲ್ಪ ಹಣ ಪಾವತಿಸಿ ಉಳಿದ ಹಣ ಪಡೆದುಕೊಳ್ಳುವಂತೆ ನಂಬಿಸಿದ್ದಾನೆ.ಹಣ ಪಡೆಯಲು ತೊಂದರೆ ಆದ್ರೆ ತಾನೇ ಇಂಡಿಯಾಗೆ ಬರುವುದಾಗಿ ತಿಳಿಸಿದ್ದಾನೆ.ಈತನ ಮಾತುಗಳನ್ನ ನಂಬಿದ ಸುನಿತಾ ಕುಮಾರಿ ಹಂತ ಹಂತವಾಗಿ 10.90 ಲಕ್ಷ ಹಣ ವರ್ಗಾಯಿಸಿದ್ದಾರೆ.ಮತ್ತಷ್ಟು ಹಣದ ಬೇಡಿಕೆ ಇಟ್ಟಾಗ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ತಾವು ಮೋಸ ಹೋಗಿರುವುದು ಖಚಿತವಾಗಿದೆ.ಈ ಬಗ್ಗೆ ಸುನಿತಾ ಕುಮಾರಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗೋಕುಲಂ ನ ಕಿರಣ್ ಎಂಬುವರು ಆನ್ ಲೈನ್ ಟ್ರೇಡಿಂಗ್ ಕುರಿತಂತೆ ಇನ್ಸ್ಟಾಗ್ರಾಂ ನಲ್ಲಿ ಬಂದ ಜಾಹಿರಾತು ನಂಬಿ ಅವರು ನೀಡಿದ ಸಲಹೆ ಮೇರೆಗೆ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಂಡು ಟ್ರೇಡಿಂಗ್ ಮಾಡಿದ್ದಾರೆ.ಹಂತಹಂತವಾಗಿ 29.40 ಲಕ್ಷ ಹೂಡಿಕೆ ಮಾಡಿ ಕೊನೆಗೆ ತಾವು ಮೋಸ ಹೋಗಿರುವುದಾಗಿ ಖಚಿತಪಡಿಸಿಕೊಂಡು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಟಿ.ಕೆ.ಲೇಔಟ್ ನ ಬೀನಾ ಎಂಬುವರು ಮೂವಿಗಳಿಗೆ ರಿವ್ಯೂ ಹಾಗೂ ರೇಟಿಂಗ್ಸ್ ಕೊಡುವ ಆಮಿಷಕ್ಕೆ ಸಿಲುಕಿ 8,08,000/- ಹಣ ಕಳೆದುಕೊಂಡಿದ್ದಾರೆ.ಟೆಲಿಗ್ರಾಂ ಗ್ರೂಪ್ ಗೆ ಸೇರಿಸಿಕೊಂಡು ಆರಂಭದಲ್ಲಿ ರಿವ್ಯೂಗಳಿಗೆ 6000/- ನೀಡಿದ್ದಾರೆ.ಇದನ್ನ ನಂಬಿದ ಬೀನಾ ರವರು ಹಂತಹಂತವಾಗಿ 8 ಲಕ್ಷ ಹಣ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದಾರೆ.ಈ ಸಂಭಂಧ ಬೀನಾ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…