ಅಪ್ರಾಪ್ತ ಬಾಲಕಿ ಅಪಹರಿಸಿ,ವಿವಾಹವಾಗಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ ಸಾಬೀತು…ಅಪರಾಧಿಗೆ 24 ವರ್ಷ ಜೈಲು ಶಿಕ್ಷೆ ತೀರ್ಪು…ಚಾಮರಾಜನಗರ ನ್ಯಾಯಾಲಯ ಆದೇಶ…
- Crime
- September 27, 2025
- No Comment
- 148


ಅಪ್ರಾಪ್ತ ಬಾಲಕಿ ಅಪಹರಿಸಿ,ವಿವಾಹವಾಗಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ ಸಾಬೀತು…ಅಪರಾಧಿಗೆ 24 ವರ್ಷ ಜೈಲು ಶಿಕ್ಷೆ ತೀರ್ಪು…ಚಾಮರಾಜನಗರ ನ್ಯಾಯಾಲಯ ಆದೇಶ…
ಚಾಮರಾಜನಗರ,ಸೆ27,Tv10 ಕನ್ನಡ
ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಬಾಲ್ಯವಿವಾಹ ಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿದ ಆರೋಪಿಗೆ ಚಾಮರಾಜನಗರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 24 ವರ್ಷ ಜೈಲು ಶಿಕ್ಷೆ ತೀರ್ಪು ಪ್ರಕಟಿಸಿದೆ.ಆರೋಪಿಗೆ ಸಾಥ್ ನೀಡಿದ ಸ್ನೇಹಿತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಜೆ.ಕೃಷ್ಣ ರವರು ತೀರ್ಪು ಪ್ರಕಟಿಸಿದ್ದಾರೆ.ಯಳಂದೂರು ತಾಲೂಕಿನ ಹೇಮಂತ್ ಕುಮಾರ್(20) ಹಾಗೂ ಅರುಣ್ ಕುಮಾರ್ ಶಿಕ್ಷೆಗೆ ಒಳಗಾದವರು.
ಈ ಸಂಭಂಧ 2021 ರಲ್ಲಿ ಅಗರಮಾಂಬಳ್ಳಿ ಠಾಣೆಯ ಅಂದಿನ ವೃತ್ತ ನಿರೀಕ್ಷಕರಾದ ಎಂ.ಎಲ್.ಶೇಖರ್ ರವರು ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿದ್ದರು.
16 ವರ್ಷದ ಅಪ್ರಾಪ್ತ ಬಾಲಕಿಯನ್ನ ಮೊದಲ ಆರೋಪಿಯಾದ ಹೇಮಂತ್ ಕುಮಾರ್ ಪುಸಲಾಯಿಸಿ ರೈಲಿನಲ್ಲಿ ಬೆಂಗಳೂರಿಗೆ ಕರದೊಯ್ದಿದ್ದ.ರೈಲಿನಲ್ಲೇ ವಿವಾಹ ಮಾಡಿಕೊಂಡು ಬೆಂಗಳೂರಿಗೆ ತಲುಪಿ ಎರಡನೇ ಆರೋಪಿ ಅರುಣ್ ಕುಮಾರ್ ಸ್ನೇಹಿತನ ಮನೆಯಲ್ಲಿ ಇರಿಸಿಕೊಂಡು ಬಾಲಕಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ.ಈ ಸಂಬಂಧ ಹೇಮಂತ್ ಕುಮಾರ್ ವಿರುದ್ದ ಅಪಹರಣ,ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.ಕೃತ್ಯಕ್ಕೆ ಸಹಕರಿಸಿದ ಅರುಣ್ ಕುಮಾರ್ ಮೇಲೂ ಆರೋಪ ಹೊರೆಸಲಾಗಿತ್ತು.ವಾದ ವಿವಾದ ಆಲಿಸಿದ ನ್ಯಾಯಾಧೀಶರಾದ ಎಸ್.ಜೆ.ಕೃಷ್ಣ ರವರು ಹೇಮಂತ್ ಕುಮಾರ್ ಗೆ ಮೂರು ಕೃತ್ಯಗಳಿಗೆ ಸೇರಿದಂತೆ 24 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.ಎರಡನೇ ಆರೋಪಿ ಅರುಣ್ ಕುಮಾರ್ ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಕೆ.ಯೋಗೇಶ್ ರವರು ವಾದ ಮಂಡಿಸಿದ್ದಾರೆ…