
ಹಾಡುಹಗಲೇ ರೌಡಿಶೀಟರ್ ಭೀಕರ ಕೊ…ದಸರಾ ವಸ್ತು ಪ್ರದರ್ಶನ ಬಳಿ ಘಟನೆ…ಯುವಕರ ತಂಡದಿಂದ ಕೃತ್ಯ…ಕಾರ್ತಿಕ್ ಕೊ ಗೂ ಈ ಘಟನೆಗೂ ಸಂಭಂಧವಿದೆಯೇ…?
- CrimeTV10 Kannada Exclusive
- October 7, 2025
- No Comment
- 514

ಮೈಸೂರು,ಅ7,Tv10 ಕನ್ನಡ

ಹಾಡುಹಗಲೇ ಯುವಕರ ತಂಡವೊಂದು ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಹತ್ಯೆಗೈದ ಘಟನೆ ಮೈಸೂರಿನ ದಸರಾ ವಸ್ತುಪ್ರದರ್ಶನ ಬಳಿ ನಡೆದಿದೆ.ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್@ಮುಖಾಮುಚ್ಚಿ@ಗಿಲಿಗಿಲಿ ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ವ್ಯಕ್ತಿಯ ಮೇಲೆ ಲಾಂಗ್ ಗಳಿಂದ ದಾಳಿ ನಡೆಸಿದ ಯುವಕರ ಗುಂಪು ಕಾರಿನಿಂದ ಹೊರಗೆ ಎಳೆದು ಹಿಗ್ಗಾ ಮುಗ್ಗ ಹಲ್ಲೆ ನಡೆಸಿ ಪರಾರಿಯಾಗಿದೆ.ತಲೆ ಕೈ ಕಾಲು ಹಾಗೂ ದೇಹದ ಭಾಗಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಎಂಬಾತನ ಕೊಲೆ ಆಗಿತ್ತು. ಕಾರ್ತಿಕ್ ಗೂ ಹಾಗೂ ಇಂದು ಕೊಲೆಯಾದ ವೆಂಕಟೇಶ್ ಗೂ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ.ಒಂದು ಮೂಲದ ಪ್ರಕಾರ ಕಾರ್ತಿಕ್ ಕೊಲೆಗೆ ವೆಂಕಟೇಶ್ ಸಹಕಾರವಿತ್ತು ಎನ್ನಲಾಗಿದೆ.ಕಾರ್ತಿಕ್ ಕಡೆಯ ಗುಂಪು ದಾಳಿ ನಡೆಸಿ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ.ಕಾರ್ತಿಕ್ ಕೊಲೆಗೆ ಈ ಹತ್ಯೆ ರಿವೆಂಜ್ ಎಂದು ಹೇಳಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಭೇಟಿ ನೀಡಿದ್ದಾರೆ.ಸ್ಥಳಕ್ಕೆ ನಜರಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ…