
ಬಿಜೆಪಿ ಕಾರ್ಯಕರ್ತರಿಗೆ ಕಾಂತಾರಾ ಮೂವಿ ವೀಕ್ಷಿಸಲು ಆಫರ್…ಮಾಜಿ ಸಂಸದ ಪ್ರತಾಪ್ ಸಿಂಹ ಆಹ್ವಾನ…ಡಿಆರ್ ಸಿಯಲ್ಲಿ ಬುಕ್ ಮಾಡಿ ಇನ್ವೈಟ್…
- TV10 Kannada Exclusive
- October 3, 2025
- No Comment
- 33
ಮೈಸೂರು,ಅ3,Tv10 ಕನ್ನಡ
ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಚಿತ್ರ ವೀಕ್ಷಿಸಲು ಮಾಜಿ ಸಂಸದ ಪ್ರತಾಪ್ ಸಿಂಹ ನಾಳಿನ ಶೋಗೆ ಥಿಯೇಟರ್ ಬುಕ್ ಮಾಡಿದ್ದಾರೆ.ಕಾರ್ಯಕರ್ತರ ಜೊತೆ ನೋಡಲು ತಮ್ಮ ಫೇಸ್ ಬುಕ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿರುವ ಪ್ರತಾಪ್ ಸಿಂಹ ಸಿನಿಮಾ ನೋಡಲು ಆಹ್ವಾನಿಸಿದ್ದಾರೆ.
ಎಲ್ಲರೂ ಬನ್ನಿ ಕಾಂತಾರ ಸಿನಿಮಾ ನೋಡೋಣ ಎಂದು ಮೆಸೇಜ್ ಮಾಡಿದ್ದಾರೆ.ಕಾಂತಾರ ಮೂವೀ ಪ್ರಮೋಷನ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ನಿಂತಿರುವ ಬಗ್ಗೆ ಸಾಕಷ್ಟು ಅನುಮಾನಗಳು ಎದ್ದಿವೆ.
ನಟ ರಿಷಭ್ ಶೆಟ್ಟಿ ಸಿನಿಮಾ ಪರ ನಿಂತ ಪ್ರತಾಪ್ ಸಿಂಹ ಬಿಜೆಪಿಗೆ ಸೆಳೆಯಲು ಮುಂದಾದ್ರ…? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.
ಕಾಂತಾರ ಮೂವೀ ನೋಡಲು ಪ್ರತಾಪ್ ಸಿಂಹ ಫ್ರೀ ಟಿಕೆಟ್ ಆಫರ್ ಮಾಡಿ
ಕಾರ್ಯಕರ್ತರೆಲ್ಲಾ ಒಡಗೂಡಿ ಕಾಂತಾರ ನೋಡೋಣ ಎಂದು ಫ್ರೀ ಆಫರ್ ಮಾಡಿದ್ದಾರೆ.
ಎಲ್ಲರೂ ಸಿನಿಮಾಗೆ ಬನ್ನಿ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಮೆಸೇಜ್ ಮಾಡಿದ್ದಾರೆ.
ಮೈಸೂರಿನ ಡಿಆರ್ಸಿ ಸಿನಿಮಾಸ್‌ನಲ್ಲಿ
68920/- ರೂಪಾಯಿ ನೀಡಿ ಟಿಕೆಟ್ ಬುಕ್ ಮಾಡಿದ್ದಾರೆ.ನಾಳೆ ಸಂಜೆ 4 ಗಂಟೆ ಶೋಗೆ ಆಹ್ವಾನಿಸಿದ್ದಾರೆ…