
ತಾಳಿ ಕಟ್ಟಲು 25 ಲಕ್ಷ ಕ್ಯಾಶ್ ಹಾಯುಂಡೈ ಕಾರಿಗೆ ಡಿಮ್ಯಾಂಡ್…ಮುರಿದುಬಿದ್ದ ಮದುವೆ…ಮದುವೆ ಗಂಡು ಸೇರಿದಂತೆ 5 ಮಂದಿ ವಿರುದ್ದ FIR ದಾಖಲು…
- Crime
- October 11, 2025
- No Comment
- 259


ಮೈಸೂರು,ಅ11,Tv10 ಕನ್ನಡ
ವೈದ್ಯೆಯನ್ನ ವರಿಸಿ ಹಸೆಮಣೆ ಏರಬೇಕಿದ್ದ ವರನ ವರದಕ್ಷಿಣೆ ದುರಾಸೆಗೆ ಮದುವೆ ಮುರಿದುಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.ನಿಶ್ಚಿತಾರ್ಥದ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ಪಡೆದರೂ ಮತ್ತಷ್ಟು ವರದಕ್ಷಿಣೆಗೆ ಬೇಡಿಕೆ ಇಟ್ಟ ಹಿನ್ನಲೆ ಮದುವೆ ಮುರಿದುಬಿದ್ದಿದೆ.
ಈ ಬೆಳವಣಿಗೆಯಿಂದ ಮೈಸೂರಿನ ಗಂಗೋತ್ರಿ ಬಡಾವಣೆಯ ವಧು ಕುಟುಂಬ ಆತಂಕಕ್ಕೆ ಸಿಲುಕಿದೆ.ವರನಾಗಬೇಕಿದ್ದ ತೇಜಸ್,ಈತನ ತಾಯಿ ನಾಗರತ್ನ,ತಂದೆ ಮಹದೇವ,ಶಶಿಕುಮಾರ್ ಹಾಗೂ ಸುಮ ಎಂಬುವರ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಂಗೋತ್ರಿ ಬಡಾವಣೆಯ ಮಮತಾದೇವಿ ಎಂಬುವರ ಮಗಳು ಡಾ.ನೀತು ಜೊತೆ ಕೂರ್ಗಳ್ಳಿ ಗ್ರಾಮದ ತೇಜಸ್ ಜೊತೆ ಆಗಸ್ಟ್ 31 ರಂದು ನಿಶ್ಚಿತಾರ್ಥ ನೆರವೇರಿತ್ತು.ನಿಶ್ಚಿತಾರ್ಥ ವೇಳೆ ವರನಿಗೆ 150 ಗ್ರಾಂ ಚಿನ್ನ,ಒಂದು ವಜ್ರದ ಉಂಗುರ,10 ಲಕ್ಷ ಕ್ಯಾಶ್ ವರದಕ್ಷಿಣೆಯಾಗಿ ನೀಡಲಾಗಿತ್ತು.ಹುಡುಗನ ಮನೆಯವರ ಬೇಡಿಕೆಯಂತೆ ಕೋಟೆ ಹುಂಡಿ ಗ್ರಾಮದಲ್ಲಿರುವ ವಿಹಂಗಮ ಹೋಂಸ್ಟೇ ನಲ್ಲಿ ನಿಶ್ಚಿತಾರ್ಥ ಮಾಡಿಕೊಡಲಾಗಿತ್ತು.ಜೊತೆಗೆ ಸಾ.ರಾ ಕನ್ವೆನ್ಷನ್ ಹಾಲ್ ನಲ್ಲೇ ಮದುವೆ ಮಾಡಬೇಕೆಂಬ ಷರತ್ತು ಹಾಕಲಾಗಿತ್ತು.ಮಗಳ ಉಜ್ವಲ ಭವಿಷ್ಯಕ್ಕಾಗಿ ತಂದೆ 1.5 ಲಕ್ಷ ಮುಂಗಡ ನೀಡಿ ಸಾ.ರಾ.ಕನ್ವೆನ್ಷನ್ ಹಾಲ್ ಬುಕ್ ಮಾಡಿದ್ರು.ಇನ್ನೇನು ಹಸೆಮಣೆ ಏರಲು ವಧು ಸಿದ್ದತೆ ನಡೆಸುತ್ತಿರುವಾಗಲೇ ತೇಜಸ್ ಮನೆಯವರು ಬಂದು ಶಾಕ್ ಕೊಟ್ಟಿದ್ದಾರೆ.25 ಲಕ್ಷ ಹೆಚ್ಚಿನ ವರದಕ್ಷಿಣೆ ಹಾಗೂ 20 ಲಕ್ಷ ಮೌಲ್ಯದ ಹೈಯುಂಡಾಯ್ ಕಾರ್ ಗೆ ಬೇಡಿಕೆ ಇಟ್ಟಿದ್ದಾರೆ.ಸಾಕಷ್ಟು ವರದಕ್ಷಿಣೆ ಕೊಟ್ಟಿದ್ದೇವೆ ಮತ್ತೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದಾಗ ಮದುವೆ ಕ್ಯಾನ್ಸಲ್ ಮಾಡಿದ್ದಾರೆ.ಕಾರು ಕೊಡಿಸಲು ಸಾಧ್ಯವಾಗದಿದ್ರೆ ಮದುವೆ ಯಾಕೆ ಮಾಡ್ತೀರಾ ಎಂದು ವೆಂಗ್ಯ ಮಾಡಿದ್ದಾರೆ.ಸಾಕಷ್ಟು ಮನವಿ ಮಾಡಿದ್ರೂ ಹೆಚ್ಚಿನ ವರದಕ್ಷಿಣೆ ಬೇಡಿಕೆಯ ಪಟ್ಟು ಸಡಲಿಸದೆ ಮದುವೆ ಕ್ಯಾನ್ಸಲ್ ಮಾಡಿದ್ದಾರೆ.ಈ ಬೆಳವಣಿಗೆಯಿಂದ ಬೇಸತ್ತ ಮಮತಾ ದೇವಿ ಹಾಗೂ ಡಾ.ನೀತು ರವರು ಕೈ ಹಿಡಿಯಬೇಕಿದ್ದ ತೇಜಸ್ ಹಾಗೂ ಮನೆಯವರ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾರೆ…