
ಮೈಸೂರು ಪೊಲೀಸ್ ಅಲರ್ಟ್…ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ…ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್…400 ಕ್ಕೂ ಹೆಚ್ಚು ಪ್ರಕರಣ ದಾಖಲು…
- CrimeTV10 Kannada Exclusive
- October 12, 2025
- No Comment
- 39

ಮೈಸೂರು,ಅ12,Tv10 ಕನ್ನಡ

ಇತ್ತೀಚೆಗೆ ನಡೆದ ಭೀಕರ ಕೊಲೆ ರೇಪ್ ಅಂಡ್ ಮರ್ಡರ್ ಮೈಸೂರು ಪೊಲೀಸರ ಕಾರ್ಯಚಟುವಟಿಕೆಯನ್ನ ಪ್ರಶ್ನಿಸುವಂತೆ ಮಾಡಿದೆ.ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಪಡೆ ಸನ್ನದ್ದಾಗಿ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ. ಪೊಲೀಸ್ ರೌಡಿ ಪ್ರತಿಬಂಧಕದಳದದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ದಿನಾಂಕ 10/10/2025 ರಿಂದ ಮೈಸೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ.ಮೈಸೂರಿನ ಉದ್ಯಾನವನಗಳು, ಬಾರ್, ವೈನ್ ಸ್ಟೋರ್‌ಗಳು, ಟೀ ಅಂಗಡಿಗಳು, ಹೋಟೆಲ್‌ಗಳು, ಬೀದಿ ಬದಿ ಅಂಗಡಿಗಳು ಸೇರಿ ಎಲ್ಲಾ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ಕಟ್ಟೆಚ್ಚರ ವಹಿಸಿದ್ದಾರೆ.
ಈ ಕಾರ್ಯಾಚರಣೆಯ ವೇಳೆ, ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ದ COTPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಇದರೊಂದಿಗೆ IMV ಪ್ರಕರಣಗಳನ್ನು ಸಹ ಕಟ್ಟುನಿಟ್ಟಾಗಿ ದಾಖಲಿಸಲಾಗುತ್ತಿದೆ.
ಈಗಾಗಲೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದವರು ಸಂಖ್ಯೆ 405.COTPO ಪ್ರಕರಣ ದಾಖಲಾಗಿರುವುದು 204.ಮತ್ತು
ಪೆಟ್ಟಿ ಕೇಸ್ ಹಾಗೂ ಕೆಪಿ ಕಾಯ್ದೆಯಡಿ – 487 ಪ್ರಕರಣಗಳನ್ನ ದಾಖಲಿಸಲಾಗಿದೆ.
ತ್ರಿಬಲ್ ರೈಡಿಂಗ್ – 54
ಇತರ ಪ್ರಕರಣ (ಹೆಲ್ಮೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್‌ಪ್ಲೇಟ್, ವೀಲಿಂಗ್ ) 33
ವಶಕ್ಕೆ ಪಡೆದ ವಾಹನಗಳ ಸಂಖ್ಯೆ 59.
ಮೈಸೂರಿನ ದೊಡ್ಡಕೆರೆ ಮೈದಾನ, ದಸರಾ ವಸ್ತು ಪ್ರದರ್ಶನದ ಪಾರ್ಕಿಂಗ್ ಸ್ಥಳ, ಜ್ವಾಲಾಮುಖಿ ಪಾರ್ಕಿಂಗ್ ಸ್ಥಳ, ಮಕ್ಕಳ ಉದ್ಯಾನವನ, ಆರ್‌ಎಂಸಿ ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ನಿರಂತರವಾಗಿ ಪೊಲೀಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ. ಡಿಸಿಪಿಗಳಾದ ಬಿಂದು ಮಣಿ, ಸುಂದರ್ ರಾಜ್ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ ಎಸಿಪಿಗಳು, ಇನ್ಸಪೆಕ್ಟರ್‌ಗಳು, ಸಬ್ ಇನ್ಸಪೆಕ್ಟರ್‌ಗಳು, ಎಎಸ್‌ಐಗಳು, ಹೆಡ್ ಕಾನ್ಸ್‌ಟೇಬಲ್‌ಗಳು, ಕಾನ್ಸ್‌ಟೇಬಲ್‌ಗಳು, ಮಹಿಳಾ ಸಿಬ್ಬಂದಿ ಸೇರಿ ಎಲ್ಲಾ ವಿಭಾಗದ ಪೊಲೀಸರು ಭಾಗಿಯಾಗಿದ್ದಾರೆ.
ಈ ಕಾರ್ಯಾಚರಣೆ ನಿರಂತರವಾಗಿ ನಡೆಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು. ತಮ್ಮ ಸುತ್ತಮುತ್ತ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಅಥವಾ ಅನುಮಾನಸ್ಪದ ಬೆಳವಣಿಗೆಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರು ಗುರುತನ್ನು ಗೌಪ್ಯವಾಗಿಡಲಾಗುವುದು. ಮೈಸೂರು ನಗರದಲ್ಲಿ ಶಾಂತಿ ಕಾಪಾಡಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಕೈ ಜೋಡಿಸಿ ಎಂದು
ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮನವಿ ಮಾಡಿದ್ದಾರೆ…