
ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…
- TV10 Kannada Exclusive
- October 14, 2025
- No Comment
- 38

ಹುಣಸೂರು,ಅ13,Tv10 ಕನ್ನಡ
ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಇವರಿಗೆ ತಂದೆ, ತಾಯಿ, ಸಹೋದರ, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಆಸ್ಪತ್ರೆಗೆ ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್‌ಗೌಡ ಸೇರಿದಂತೆ ಇಲಾಖೆ ಅಧಿಕಾರಿಗಳು ಸಹೋದ್ಯೋಗಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಶ್ಯಾನುಬೋಗನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ…