
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…
- TV10 Kannada Exclusive
- October 12, 2025
- No Comment
- 7
ಮೈಸೂರು,ಅ12,Tv10 ಕನ್ನಡ
ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು ಆರ್.ಎಸ್.ಎಸ್ ವತಿಯಿಂದ ಶತಮಾನೋತ್ಸವ ಅಂಗವಾಗಿ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.ಗೋಕುಲಂ ನ ಮೈಸೂರು ಒನ್ ಕೇಂದ್ರ ದ ಮೈದಾನದಿಂದ ಸುಮಾರು 2000 ಕ್ಕೂ ಹೆಚ್ಚು ಸ್ವಯಂಸೇವಕರು ಪಥಸಂಚಲನದಲ್ಲಿ ಸಾಗಿದರು.ಎರಡು ವಾಹಿನಿಯಾಗಿ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಪಥಸಂಚಲನ ಸಾಗಿತು.ಸುಮಾರು 2.7 ಕಿಮೀ ಸಾಗಿದ ಪಥಸಂಚಲನ ಮತ್ತೆ ಮೈಸೂರು ಒನ್ ಕೇಂದ್ರದ ಮೈದಾನದಲ್ಲಿ ಮುಕ್ತಾಯವಾಯಿತು.ಪಥಸಂಚಲನದಲ್ಲಿ ಭಾಗಿಯಾಗಿದ್ದಾ ಮಹೇಂದ್ರ ಜೋಯೆಲ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.ಸ್ಥಳದಲ್ಲಿ ಶುಶ್ರೂಷೆ ಮಾಡಿದ ನಂತರ ಮಹೇಂದ್ರ ಜೋಯೆಲ್ ರವರು ತಮ್ಮ ಮನೆಗೆ ಹಿಂದಿರುಗಿದ್ದಾರೆಂದು ಹೇಳಲಾಗಿದೆ.ನಂತರ ಪರಿಶೀಲನೆಗಾಗಿ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ.ಆಸ್ಪತ್ರೆಯಲ್ಲಿ ಮಹೇಂದ್ರ ಜೋಯಲ್ ಮೃತಪಟ್ಟಿದ್ದಾರೆ.ಮಹೇಂದ್ರ ಜೋಯೆಲ್ ಸಾವಿಗೆ ಹೃದಯಾಘಾತ ಎಂದು ಆಸ್ಪತ್ರೆ ಮೂಲಗಳ ತಿಳಿಸಿದೆ…