ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ.
- TV10 Kannada Exclusive
- October 21, 2025
- No Comment
- 15






ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ.
ಹನೂರು: ತಾಲೂಕಿನ ಪ್ರಸಿದ್ದ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ದೀಪಾವಳಿ ಜಾತ್ರೆ ವಿಶೇಷವಾಗಿ ಆಗಮಿಸಿದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಲೆ ಮಾದಪ್ಪನ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿ ಶ್ರೀಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ಹಾಗೂ ನರಕ ಚತುರ್ಧಶಿ ಮತ್ತು ವಿವಿದ ಸೇವೆಗಳನ್ನು ನೆರವೇರಿಸಿದ್ದಾರೆ.
ಮಹಾಲಯ ಅಮಾವಾಸ್ಯೆ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹದೆಶ್ವರ ಸ್ವಾಮಿಗೆ ಭಾನುವಾರ ಎಣ್ಣೆ ಮಜ್ಜನ ಸೇವೆಯನ್ನು ಜರುಗಿಸಲಾಯಿತು. ಮುಂಜಾವಿನ ನುಸಿಕಿನಿಂದಲೇ ಮಹದೇಶ್ವರ ಸ್ವಾಮಿ ಎಣ್ಣೆ ಮಜ್ಜನ, ಬಿಲ್ವಾರ್ಚನೆ, ಮಹಾಮಂಗಳಾರತಿ, ರುದ್ರಾಭಿಷೇಕ, ಪುಷ್ಪಾರ್ಚನೆ, ಗಂದಾಭಿಷೇಕ, ವಿವಿಧ ಪೂಜೆಗಳನ್ನು ನೆರವೇರಿಸಿದರು.
ಬಳಿಕ ಮಾದೆಶ್ವರ ಸ್ವಾಮಿಯ ಧರ್ಮ ಧರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಎಣ್ಣೆ ಮಜ್ಜನ ಸೇವೆಗೆ ಎಣ್ಣೆ ಮಜ್ಜನ ಸೇವೆಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಬೆಳ್ಳಿ ರಥೋತ್ಸವ, ಬಸವ ವಾಹನ, ಹುಲಿವಾಹನ, ರುದ್ರಾಕ್ಷಿ ಮಂಟಪ ವಾಹನ, ಉರುಳು ಸೇವೆ ಪಂಜಿನ ಸೇವೆ, ಇನ್ನಿತರ ವಿವಿಧ ಉತ್ಸವಗಳಲ್ಲಿ ಭಾಗಿಯಾಗಿ ತಮ್ಮ ತಮ್ಮ ಹರಕೆ ಹಾಗೂ ಕಾಣಿಕೆಗಳನ್ನು ತೀರಿಸಿ ಸ್ವಾಮಿಯ ದರ್ಶನ ಪಡೆದರು.
ಸೋಮವಾರ ಮಮಹದೇಶ್ವರ ಸ್ವಾಮಿಗೆ ನರಜ ಚತುರ್ಧಶಿ ಪ್ರಯುಕ್ತವಾಗಿ ವಿಷೇಶ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ಸಂಜೆ ವೇಳೆಗೆ ಚಿನ್ನದ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಜೊತೆಗೆ ಹುಲಿವಾಹನ, ಬಸವಾಹನ, ರುದ್ರಾಕ್ಷಿ ಮಂಟಪ ರಥಗಳನ್ನು ಎಳೆದು ಹರಕೆ ಸೇವೆ ಸಲ್ಲಿಸಿದರು. ಉರುಳು ಸೇವೆ, ಪಂಜಿನ ಸೇವೆಗಳನ್ನು ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಇಂದು ಮಲೆ ಮಾದಪ್ಪನಿಗೆ ಹಾಲರವಿ ಉತ್ಸವ:
ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗುವ ಹಾಲರುವೆ ಉತ್ಸವ ಪೂಜಾ ಕೈಂಕರ್ಯಗಳು ಜರುಗಲಿದ್ದು ಸ್ವಾಮಿಗೆ ಹಾಲರವಿ ಉತ್ಸವ ಬೇಡಗಂಪಣ ಸಮುದಾಯದ ಪುಟ್ಟ ಪುಟ್ಟ ಬಾಲೆಯರು ಮಹದೇಶ್ವರ ಬೆಟ್ಟದಿಂದ ಏಳು ಕಿಲೋಮೀಟರ್ ದೂರವಿರುವ ಹಾಲ ಹಳ್ಳಕ್ಕೆ ತಲುಪಿ ಬೆಳಿಗ್ಗೆಯಿಂದ ಉಪವಾಸವಿದ್ದು, ಹಾಲ ಹಳ್ಳದಿಂದ ಪೂಜೆ ಪುರಸ್ಕಾರ ಮಾಡಿ ಕಳಸ ಹೊತ್ತು ದೇವಾಲಯಕ್ಕೆ ಆಗಮಿಸುತ್ತಾರೆ.
ಸಂಪ್ರದಾಯದಂತೆ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಯತೆ ಸ್ಥಳೀಯ ಬೇಡಗಂಪಣರ ಹತ್ತರಿಂದ ಹನ್ನೆರಡು ವರ್ಷದ ನೂರೊಂದು ಹೆಣ್ಣು ಮಕ್ಕಳು ಉಪವಾಸ ವಿದ್ದು, ಬೆಳ್ಳಂಬೆಳಿಗ್ಗೆ ಮಲೆ ಬೆಟ್ಟದಿಂದ ಏಳು ಕಿ.ಮೀ ಅರಣ್ಯದ ಕಾಲು ದಾರಿಯಲ್ಲಿ ನಡೆದು ಹಾಲಹಳ್ಳದಲ್ಲಿ ವಾದ್ಯ ಮೇಳದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಮೆರವಣಿಗೆ ಬಂದು ಪಟ್ಟದ ಆನೆ, ಡೊಳ್ಳು ಕುಣಿತದ ಜೊತೆ ಛತ್ರಿ ಚಾಮರದ ಜೊತೆಗೆ ದೇವಾಲಯ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿರುವ ನೀರನ್ನು ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಹಾಲರವೆ ಉತ್ಸವ ನೆರವೇರಿಸಲಿದ್ದಾರೆ.
ವರದಿ :ವಿಜಯ್ ಕುಮಾರ್. ಕಾಂಚಳ್ಳಿ /ಹನೂರು.