ನಾನ್ಯಾರು ಗೊತ್ತೇನೋ..ರೌಡಿ ಕೌಶಿಕ್…ನಮ್ಮ ಬಿಲ್ ಕಟ್ಟೋ…ಬಾರ್ ನಲ್ಲಿ ಆವಾಜ್…ಬಿಲ್ ಕಟ್ಟದ ವ್ಯಕ್ತಿಗೆ ಚಾಕು ಇರಿತ…ರೌಡಿಶೀಟರ್ ಸೇರಿದಂತೆ 5 ಮಂದಿ ವಿರುದ್ದ FIR…
- Crime
- October 21, 2025
- No Comment
- 183
ನಾನ್ಯಾರು ಗೊತ್ತೇನೋ..ರೌಡಿ ಕೌಶಿಕ್…ನಮ್ಮ ಬಿಲ್ ಕಟ್ಟೋ…ಬಾರ್ ನಲ್ಲಿ ಆವಾಜ್…ಬಿಲ್ ಕಟ್ಟದ ವ್ಯಕ್ತಿಗೆ ಚಾಕು ಇರಿತ…ರೌಡಿಶೀಟರ್ ಸೇರಿದಂತೆ 5 ಮಂದಿ ವಿರುದ್ದ FIR…
ಮೈಸೂರು,ಅ21,Tv10 ಕನ್ನಡ
ತಾನು ಕುಡಿದ ಎಣ್ಣೆಗೆ ಬಿಲ್ ಕಟ್ಟುವಂತೆ ವ್ಯಕ್ತಿಯೊಬ್ಬನಿಗೆ ಆವಾಜ್ ಹಾಕಿದ ರೌಡಿಶೀಟರ್ ಒಬ್ಬ ತನ್ನ ಸಹಚರರೊಂದಿಗೆ ಸೇರಿ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತೀವ್ರ ಗಾಯಗೊಂಡ ರಿಯಲ್ ಎಸ್ಟೇಟ್ ನಡೆಸುತ್ತಿರುವ ವ್ಯಕ್ತಿ ಗುರುಪ್ರಸಾದ್ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚಾಕುವಿನಿಂದ ಇರಿದ ರೌಡಿಶೀಟರ್ ಕೌಶಿಕ್,ದೇವರಾಜ್ ಹಾಗೂ ಇತರ ಮೂರು ಮಂದಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಗುರುಪ್ರಸಾದ್ ಡ್ರಿಕ್ಸ್ ಮಾಡಲು ಬಾರ್ ಒಂದಕ್ಕೆ ಹೋಗಿದ್ದಾರೆ.ಡ್ರಿಂಕ್ಸ್ ಮುಗಿಸಿ ಬಿಲ್ ಕಟ್ಟುವ ವೇಳೆ ಕೌಶಿಕ್ ಸಹ ಅದೇ ಬಾರ್ ನಲ್ಲಿದ್ದು ತಾನು ತನ್ನ ಸ್ನೇಹಿತರು ಕುಡಿದ ಬಿಲ್ ಕಟ್ಟುವಂತೆ ಧಂಕಿ ಹಾಕಿದ್ದಾನೆ.ಬಿಲ್ ಕಟ್ಟಲು ನಿರಾಕರಿಸಿದಾಗ ನಾನ್ಯಾರು ಗೊತ್ತಾ ರೌಡಿ ಕೌಶಿಕ್.ಬಿಲ್ ಕಟ್ಟದೇ ಇದ್ರೆ ಗತಿ ಕಾಣಿಸ್ತೀನಿ ಅಂತ ಆವಾಜ್ ಹಾಕಿದ್ದಾನೆ.ಈ ವೇಳೆ ಗುರುಪ್ರಸಾದ್ ಬಾರ್ ನಿಂದ ಹೊರಬಂದಿದ್ದಾರೆ.ಮತ್ತೆ ಸಂಜೆ ತಮ್ಮ ಸಹೋದರ ಕರುಣಾಕರ್ ಹಾಗೂ ತನ್ನ ಸ್ನೇಹಿತರ ಜೊತೆ ಅದೇ ಬಾರ್ ನಲ್ಲಿ ಡ್ರಿಂಕ್ಸ್ ಮಾಡಲು ಹೋದಾಗ ಅದೇ ಕೌಶಿಕ್ ಎದುರಾಗಿದ್ದಾನೆ.ಮಧ್ಯಾಹ್ನ ನನ್ನ ಬಿಲ್ ಕಟ್ಟದೆ ಓಡಿಹೋದವನು ಇವನೇ ಎಂದು ಹಿಯ್ಯಾಳಿಸಿ ಜಗಳ ತೆಗೆದಿದ್ದಾನೆ.ಕೌಶಿಕ್ ಆವಾಜ್ ಗೆ ಹೆದರಿದ ಸಹೋದರ ಹಾಗೂ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ.ಈ ವೇಳೆ ಗುರುಪ್ರಸಾದ್ ಮೇಲೆ ಕೌಶಿಕ್ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ.ಘಟನೆಯಲ್ಲಿ ಗಾಯಗೊಂಡ ಗುರುಪ್ರಸಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಚಾಕುವಿನಿಂದ ಇರಿದು ಪರಾರಿಯಾದ ಕೌಶಿಕ್,ದೇವರಾಜ್ ಹಾಗೂ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ…