ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿತು.

ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿತು.

ಹನೂರು :ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಇಲ್ಲಿನ ಮಲೆ‌ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಈ ದಿನ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೇಡ ಗಂಪಣ ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಸಮುದಾಯದ ಪುಟ್ಟ ಬಾಲಕಿಯರು ರಥಕ್ಕೆ ಬೆಲ್ಲದ ಆರತಿ ಬೆಳಗಿದರು.

ಸಾಲೂರು ಬೃಹನ್ಮಠದ ಪೀಠಾಧಿಪತಿ ಸ್ವಾಮಿಗಳ ಹಾಗೂ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ರಥ ಮುಂಭಾಗ ಬೂದುಗುಂಬಳ ಕಾಯಿಯನ್ನು ಒಡೆಯುವ ಮೂಲಕ ಬೆಳಗ್ಗೆ 9.15ರಿಂದ 9.55ವರಗೆ ಮಹಾರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ನೂರಾರು ಭಕ್ತರು ಉಘೇ ಮಾದಪ್ಪ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು. ದೇವಾಲಯ ಆವರಣ ಸೇರಿದಂತೆ ಸುತ್ತಮುತ್ತ‌ ನೆರೆದಿದ್ದ ಸಾವಿರಾರು ಭಕ್ತರು ಮೊಳಗಿಸಿದ ‘ಉಘೇ ಮಾದಪ್ಪ, ಉಘೇ ಮಾಯ್ಕಾರ.. ಉಘೇ ಉಘೇ..’ ಎಂಬ ಉದ್ಗಾರ ಬೆಟ್ಟದಾದ್ಯಂತ ಅನುರಣಿಸಿತು.

ಹೂವು,ಬಾಳೆ ಕಂದು, ಬಣ್ಣ ಬಣ್ಣಗಳ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ರಥವು ದೇವಾಲಯದ ಸುತ್ತ ಒಂದು ಸುತ್ತು ಸಾಗಿತು. ರಥ ಸಾಗಿದ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು.

ನವ ವಧುವರರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು ಜವನ, ಧವಸ ಧಾನ್ಯ, ನಾಣ್ಯಗಳನ್ನು ಎಸೆದು ಹರಕೆ ತೀರಿಸಿದರು.
ರಥ ಸಾಗುವ ಹಾದಿಯಲ್ಲಿ ವಾದ್ಯಮೇಳ, ಛತ್ರಿ ಚಾಮರಗಳು, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಸಾಗಿ ಉತ್ಸವದ ಮೆರುಗು ಹೆಚ್ಚಿಸಿದವು.

ಉತ್ಸಾಹದಲ್ಲಿ ರಥ ಎಳೆದ ಅಧಿಕಾರಿಗಳು: ರಥೋತ್ಸವಕ್ಕ ಚಾಲನೆ ದೊರೆಯುತ್ತಿದ್ದಂತೆ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಕಾರ್ಯದರ್ಶಿ, ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಸಹಕಾರದಿಂದ ಹಾಗೂ ಭಕ್ತ ಸಮೂಹ ರಥ ಎಳೆದರು.

ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ. ರಥೋತ್ಸವದೊಂದಿಗೆ ಐದು ದಿನಗಳ ದೀಪಾವಳಿ ಜಾತ್ರೆಗೆ ತೆರೆ ಬಿದ್ದಿದೆ. ಭಕ್ತರ ಸರತಿ ಸಾಲು ರಥೋತ್ಸವದ ಬಳಿಕ ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

ಕೆಲವರು ವಿಶೇಷ ಟಿಕೆಟ್ ಖರೀದಿಸಿ ದರ್ಶನ ಪಡೆದರೆ, ಹಲವರು ಸರತಿ ಸಾಲಿನಲ್ಲಿ ಸಾಗಿ ಮಾದಪ್ಪನ ದರ್ಶನ ಪಡೆದರು. ದಾಸೋಹ, ಲಾಡು ಪ್ರಸಾದವನ್ನು ಸ್ವೀಕರಿಸಿದರು.
ಮಠದ ರಥೋತ್ಸವ ಸಂದರ್ಭದಲ್ಲಿ ಸಾಲೂರು ಬೃಹ ಪೀಠಾಧಿಪತಿಯಾದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಧಿಕಾರದ ಕಾರ್ಯದರ್ಶಿ ರಘು, ಡಿ ವೈ ಎಸ್ಪಿ ಧರ್ಮೇಂದ್ರ, ಉಪ ಕಾರ್ಯದರ್ಶಿ ಚಂದ್ರಶೇಖರ್ ಸೇರಿದಂತೆ ಲಕ್ಷಾಂತರ ಭಕ್ತರು ಜಮಾಯಿಸಿದರು.

ವರದಿ :ವಿಜಯ್ ಕುಮಾರ್. ಕಾಂಚಳ್ಳಿ/ಹನೂರು.

Spread the love

Related post

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ…

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್ ಶ್ರೀರಂಗಪಟ್ಟಣ,ಅ25,Tv10 ಕನ್ನಡ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. 44ರಲ್ಲಿ 2.13…
ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಮೈಸೂರು,ಅ23,Tv10 ಕನ್ನಡ ಸಂಸದರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ತಾತ ಮದನ್ ಗೋಪಾಲ್ ರಾಜ್ ಅರಸ್ ವಿಧಿ ವಶರಾಗಿದ್ದಾರೆ.ಈ ಹಿನ್ನಲೆಯದುವೀರ್ ಅಧಿಕೃತ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.93 ವರ್ಷ…
ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ… ಮಂಡ್ಯ,ಅ23,Tv10 ಕನ್ನಡ ಜಮೀನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತದಿಂದ ರೈತ ಸಾವನ್ನಪ್ಪಿದ ಘಟನೆಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ…

Leave a Reply

Your email address will not be published. Required fields are marked *