SLOUCH HAT ಗೆ ಬೈ ಬೈ…PEAK CAP ಗೆ ಹಾಯ್ ಹಾಯ್…ಇಂದಿನಿಂದ ಪೊಲೀಸ್ ಸಿಬ್ಬಂದಿಗಳಿಗೆ ಹೊಸ ಕ್ಯಾಪ್…ಸಿಎಂ,ಡಿಸಿಎಂ ರಿಂದ ಲಾಂಚ್…
- TV10 Kannada Exclusive
- October 28, 2025
- No Comment
- 7

ಬೆಂಗಳೂರು,ಅ28,Tv10 ಕನ್ನಡ
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ಹಾಗೂ ಮುಖ್ಯಪೇದೆಗಳಿಗೆ ಹೊಸ ಕ್ಯಾಪ್ ಧರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.ನೂತನವಾಗಿ ಆಕರ್ಷಕವಾಗಿ ಸಿದ್ದಪಡಿಸಲಾದ PEAK CAP ಗೆ ಬೆಂಗಳೂರಿನ ವಿಧಾನಸೌಧದ ಬಾಂಕೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ PEAK CAP ವ್ಯವಸ್ಥೆ ಲಾಂಚ್ ಮಾಡಿದ್ದಾರೆ.ಬ್ರಿಟಿಷರ ಕಾಲದ SLOUCH HAT ಮರೆಯಾಗಲಿದ್ದು ಪೊಲೀಸ್ ಸಿಬ್ಬಂದಿಗಳ ಶಿರದ ಮೇಲೆ PEAK CAP ರಾರಾಜಿಸಲಿದೆ.ರಾಜ್ಯದ ಎಲ್ಲಾ ಪೇದೆ ಹಾಗೂ ಮುಖ್ಯಪೇದೆಗಳಿಗೆ PEAK CAP ವಿತರಿಸಲಾಗುತ್ತದೆ.ಇಂದು ಸಾಂಕೇತಿಕವಾಗಿ 600 ಸಿಬ್ಬಂದಿಗಳಿಗೆ PEAK CAP ವಿತರಿಸಲಾಗಿದೆ.ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಸಿಬ್ಬಂದಿಗಳ ಶಿರದ ಮೇಲೆ PEAK CAP ಕಾಣಿಸಿಕೊಳ್ಳಲಿದೆ.ಇದುವರೆಗೆ ಪೇದೆಗಳಿಗೆ ನೀಡಿದ್ದ SLOUCH HAT ನಲ್ಲಿ ವೆತ್ಯಾಸಗಳೂ ಸಹ ಕಂಡು ಬರುತ್ತಿತ್ತು.ಇನ್ನುಮುಂದೆ ಅಂತಹ ವೆತ್ಯಾಸಗಳು ಈ ಕ್ಯಾಪ್ ನಲ್ಲಿ ಇರುವುದಿಲ್ಲ.KSRP,CAR ಹಾಗೂ DAR ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳೂ ಸಹ PEAK CAP ಧರಿಸಿ ಕರ್ತವ್ಯ ನಿರ್ವಹಿಸಬೇಕಿದೆ.ಇಂದಿನ ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್ ಹಾಗೂ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಪ್ರತಿ ಜಿಲ್ಲೆಯಿಂದ ಮೂವರು ಸಿಬ್ಬಂದಿಗಳನ್ನ ಗುರುತಿಸಿ ಒಟ್ಟು 600 ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಗಳು ಏಕ ಕಾಲಕ್ಕೆ PEAK CAP ಧರಿಸುವ ಮೂಲಕ ಲಾಂಚಿಂಗ್ ಗೆ ಮೆರುಗು ನೀಡಿದರು…