ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ…
- TV10 Kannada Exclusive
- October 28, 2025
- No Comment
- 18
ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ…

ಮೈಸೂರು,ಅ28,Tv10 ಕನ್ನಡ
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಇಂದು ಅಪೂರ್ವ ಸ್ನೇಹಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಚಾಮುಂಡಿಪುರಂ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.ಈ ಸಂಧರ್ಭದಲ್ಲಿ
ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ, ಆಯುರ್ವೇದ ಆಹಾರ ಕ್ರಮಗಳು ಪ್ರಸ್ತುತ ದಿನಗಳಲ್ಲಿ ಅಗತ್ಯವಾಗಿವೆ ಎಂದು
ಆಯುರ್ವೇದ ಹಿರಿಯ ವೈದ್ಯರಾದ ಡಾ. ಚಂದ್ರಶೇಖರ್ ಹೇಳಿದರು.ಆಯುರ್ವೇದ ವೈದ್ಯ ಪದ್ಧತಿ ಕಾಯಿಲೆ ಗುಣಪಡಿಸುವ ಜೊತೆಗೆ ಆರೋಗ್ಯಯುತ ಜೀವನ ನಡೆಸುವ ಕ್ರಮವನ್ನು ಕಲಿಸುತ್ತದೆ’ ಎಂದರು.
ಆಯುರ್ವೇದದ ಬಗ್ಗೆ ಜನರಿಗೆ ತಿಳಿವಳಿಕೆ ಬರಲು ಹೆಚ್ಚಿನ ಪ್ರಚಾರದ ಅಗತ್ಯ ಇದೆ’ ಎಂದರು. ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ ರವರು ಸಾರ್ವಜನಿಕರಿಗೆ
ಆಯುರ್ವೇದ ಸಸ್ಯಗಳಾದ ಅಮೃತ ಬಳ್ಳಿ, ಕೃಷ್ಣ ತುಳಸಿ, ರಾಮ ತುಳಸಿ, ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ, ಅಗಸೆ ಗಿಡ, ನೇರಳೆ ಗಿಡ, ಬೇವಿನ ಗಿಡ, ಅರಿಶಿನ ಗಿಡ ಸೇರಿದಂತೆ ಇನ್ನಿತರ ಗಿಡ ಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಾಜಿನಗರ ಪಾಲಿಕೆ ಸದಸ್ಯರಾದ ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಜಿ ನಾಗರಾಜ್, ಉದ್ಯಮಿ ಜಯರಾಮ್, ಕೆ ಎಸ್ ವಿಶ್ವನಾಥ್, ದೂರ ರಾಜಣ್ಣ, ಸುಚಿಂದ್ರ ಆನಂದ, ಪುರುಷೋತ್ತಮ್, ಜತ್ತಿ ಪ್ರಸಾದ್, ಆದರ್ಶ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು…