ಹೆಚ್ಚಿನ ಲಾಭದ ಆಮಿಷ…ಗೃಹಿಣಿಗೆ 1.59 ಕೋಟಿಗೆ ಉಂಡೆನಾಮ…
- CrimeTV10 Kannada Exclusive
- November 1, 2025
- No Comment
- 64



ಹೆಚ್ಚಿನ ಲಾಭದ ಆಮಿಷ…ಗೃಹಿಣಿಗೆ 1.59 ಕೋಟಿಗೆ ಉಂಡೆನಾಮ…
ಮೈಸೂರು,ನ1,Tv10 ಕನ್ನಡ
ಹೆಚ್ಚಿನ ಲಾಭದ ಆಮಿಷ ತೋರಿಸಿ ಗೃಹಿಣಿಗೆ 1,58,93,000/- ಕ್ಕೆ ಉಂಡನಾಮ ಹಾಕಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮೈಸೂರಿನ ಜೆಪಿ ನಗರ ನಿವಾಸಿ ಹೌಸ್ ವೈಫ್ ಪುಷ್ಪ ಜ್ವಲನಪ್ಪ ಜೈನ್ ಹಣ ಕಳೆದುಕೊಂಡವರು.ಟ್ರೇಡಿಂಗ್ ಮಾಡುವ ಉದ್ದೇಶದಿಂದ ವಂಚಕರು ಸೂಚಿಸಿದ ಆಪ್ ಗಳನ್ನ ಡೌನ್ ಲೋಡ್ ಮಾಡಿ ಅವರ ಸೂಚನೆಯಂತೆ ಆರಂಭದಲ್ಲಿ 60 ಸಾವಿರ ಹೂಡಿಕೆ ಮಾಡಿದ್ದಾರೆ.ತಮ್ಮ ಹಣಕ್ಕೆ ಲಾಭಂಶ ನೀಡಿದ ವಂಚಕರು ನಂಬಿಕೆ ಹುಟ್ಟಿಸಿದ್ದಾರೆ.ನಂತರ ಹಂತಹಂತವಾಗಿ 1,58,93,000/- ಹಣ ವರ್ಗಾಯಿಸಿದ್ದಾರೆ.ಹೂಡಿಕೆಗೆ ಸ್ಟೇಟ್ ಮೆಂಟ್ ನಲ್ಲಿ ಲಾಭಾಂಶ ತೋರಿಸಿದೆ.ಹಣ ವಿತ್ ಡ್ರಾ ಮಾಡಲು ಮುಂದಾದಾಗ 16 ಲಕ್ಷ ಪಾವತಿಸುವಂತೆ ತಾಕೀತು ಮಾಡಿದ್ದಾರೆ.ಈ ವೇಳೆ ತಾವು ಮೋಸ ಹೋಗಿರುವುದು ಖಚಿತವಾಗಿದೆ.ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…