ಮನೆಮುಂದೆ ಗಾಂಜಾ ಬೆಳೆದಿದ್ದ ಭೂಪ ಅಂದರ್…9 ಕೆಜಿ ಗಾಂಜಾ ವಶ…
- TV10 Kannada Exclusive
- October 31, 2025
- No Comment
- 22

ಮನೆಮುಂದೆ ಗಾಂಜಾ ಬೆಳೆದಿದ್ದ ಭೂಪ ಅಂದರ್…9 ಕೆಜಿ ಗಾಂಜಾ ವಶ…
ಶ್ರೀರಂಗಪಟ್ಟಣ,ಅ31,Tv10 ಕನ್ನಡ
ಶ್ರೀರಂಗಪಟ್ಟಣ ಟೌನ್ ಪೊಲೀಸರ ಕಾರ್ಯಾಚರಣೆಯಲ್ಲಿ
ಮನೆ ಮುಂದೆ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನವಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ
ಮನೆ ಮುಂದೆ ಅಲಂಕಾರಿಕ ಗಿಡ ಎಂದು ಜನರಿಗೆ ನಂಬಿಸಿ 5 ಗಾಂಜಾ ಗಿಡ ಬೆಳೆದಿದ್ದ.
ಗಿಡದ ಸುತ್ತಲೂ ಸೀರೆ ಕಟ್ಟಿ ಮರೆಮಾಚಿದ್ದ.ಈತನ ವಿರುದ್ಧ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.ಶ್ರೀರಂಗಪಟ್ಟಣ ಟೌನ್ ಪೊಲೀಸರ
ಕಾರ್ಯಾಚರಣೆ ನಡೆಸಿದ ವೇಳೆ ವ್ಯಕ್ತಿ ಮನೆ ಮುಂದೆ ಬೆಳೆದಿದ್ದ 9 ಕೆಜಿ ತೂಕದ 3 ಲಕ್ಷ ಮೌಲ್ಯದ ಗಾಂಜಾ ಗಿಡ ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ.
ಆರೋಪಿ ಸುರೇಶ್ ಎಂಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪಟ್ಟಣದ ಡಿವೈಎಸ್ಪಿ ಶಾಂತ ಮಲ್ಲಪ್ಪ ಹಾಗೂ ಇನ್ಸ್‌ಪೆಕ್ಟರ್ ಬಿ.ಜಿ. ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ…