ಸುಳ್ಳು ಅಪಾದನೆಗೆ ಬೆದರಿ ಯುವಕ ಆತ್ಮಹತ್ಯೆ…ಟೀಚರ್ ಸ್ಟೂಡೆಂಟ್ ನಡುವಿನ ಸಂಬಂಧಕ್ಕೆ ಯುವಕ ಬಲಿಯಾದನೇ…?ವಾಯ್ಸ್ ಮೆಸೇಜ್ ಹಾಕಿ ನಾಲೆಗೆ ಹಾರಿದ ಯುವಕ…ನ್ಯಾಯಕ್ಕಾಗಿ ಕೆಆರ್ ಎಸ್ ಪಕ್ಷದ ಮುಖಂಡರ ಒತ್ತಾಯ…
- CrimeTV10 Kannada Exclusive
- November 2, 2025
- No Comment
- 12

ಸುಳ್ಳು ಅಪಾದನೆಗೆ ಬೆದರಿ ಯುವಕ ಆತ್ಮಹತ್ಯೆ…ಟೀಚರ್ ಸ್ಟೂಡೆಂಟ್ ನಡುವಿನ ಸಂಬಂಧಕ್ಕೆ ಯುವಕ ಬಲಿಯಾದನೇ…?ವಾಯ್ಸ್ ಮೆಸೇಜ್ ಹಾಕಿ ನಾಲೆಗೆ ಹಾರಿದ ಯುವಕ…ನ್ಯಾಯಕ್ಕಾಗಿ ಕೆಆರ್ ಎಸ್ ಪಕ್ಷದ ಮುಖಂಡರ ಒತ್ತಾಯ…
ಪಿರಿಯಾಪಟ್ಟಣ,ನ2,Tv10 ಕನ್ನಡ
ಟೀಚರ್ ಸ್ಟೂಡೆಂಟ್ ನಡುವಿನ ಅಫೇರ್ ಗೆ ಯುವಕ ಬಲಿಯಾದ ಘಟನೆಯೊಂದು ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ.ಅನಗತ್ಯವಾಗಿ ತನ್ನ ಮೇಲೆ ಅಪಾದನೆ ಹೊರೆಸಿರುವುದಾಗಿ ಆರೋಪಿಸಿರುವ ಯುವಕ ವಾಯ್ಸ್ ಮೆಸೇಜ್ ಮಾಡಿ ಕೆ ಆರ್ ಎಸ್ ಪಕ್ಷದ ಮುಖಂಡರಿಗೆ ರವಾನಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತನಗೂ ಸ್ಟೂಡೆಂಟ್ ಗೂ ಯಾವುದೇ ಸಂಬಂಧ ಇಲ್ಲ.ನನ್ನ ಮೇಲೆ ಸುಳ್ಳು ಆರೋಪ ಹೊರೆಸಿದ್ದಾರೆ.ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ.ಘಟನೆಯಿಂದ ಸಾಕಷ್ಟು ಇರಿಟೇಟ್ ಆಗಿದೆ.ಡಾಕ್ಟರ್ ಬಂದು ಸ್ಟೂಡೆಂಟ್ ನ ಚೆಕ್ ಮಾಡಿದಾಗ ಪ್ರೆಗ್ನೆಂಟ್ ಎಂದು ಖಚಿತವಾಗಿ ಟೀಚರ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.ಶಾಲೆಗೆ ಕಳಂಕ ಬರುವ ಹಿನ್ನಲೆ ಮುಚ್ಚಿಹಾಕುತ್ತಿದ್ದಾರೆ.ಆಗಾಗ ಹುಡುಗಿಯನ್ನ ಮಾತಾಡಿಸಿದ್ದಕ್ಕೆ ನನ್ನ ಮೇಲೆ ಸಂಬಂಧ ಕಲ್ಪಿಸಿದ್ದಾರೆ.ನಾನು ತಪ್ಪು ಮಾಡಿಲ್ಲ.ಮಾಡಿದ್ರೆ ನಿಜವಾಗ್ಲೂ ಒಪ್ಪಿಕೊಳ್ತೀನಿ.ಸ್ಟೂಡೆಂಟ್ ಕಾಲ್ ಲಿಸ್ಟ್ ಚೆಕ್ ಮಾಡಿದ್ರೆ ಎಲ್ಲವೂ ಬೆಳಕಿಗೆ ಬರುತ್ತೆ.ಈವತ್ತೇ ಶಾಲೆಗೆ ಬಂದು ವಿಚಾರಿಸಿ.ತಪ್ಪು ಮಾಡಿದ ಟೀಚರ್ ಬಿಡಬಾರದು ಶಿಕ್ಷೆ ಆಗಬೇಕು ಎಂದು ವಾಯ್ಸ್ ಮೆಸೇಜ್ ಮಾಡಿ ಕೆ.ಆರ್.ಎಸ್.ಪಕ್ಷದ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಹರೀಶ್ ಗೆ ಹಾಕಿದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಪಿರಿಯಾಪಟ್ಟಣ ತಾಲೂಕು ಬೆಟ್ಟದತುಂಗಾ ಬಳಿಯ ತಾಲೂಕಿನ ಕುಡಕೂರು ಗ್ರಾಮದ ರಾಮು(27) ಮೃತ ದುರ್ದೈವಿ.ಪಿರಿಯಾಪಟ್ಟಣ ತಾಲೂಕು ಬೆಟ್ಟದತುಂಗಾ ಶಾಲೆಯೊಂದರ ಸ್ಟೂಡೆಂಟ್ ಹಾಗೂ ಪಿಟಿ ಟೀಚರ್ ನಡುವೆ ಅಫೇರ್ ಇರುವುದನ್ನ ರಾಮು ತಿಳಿದುಕೊಂಡಿದ್ದಾನೆ.ಸ್ಟೂಡೆಂಟ್ ಗರ್ಭವತಿ ಎಂದು ಖಚಿತವಾದಾಗ ಈ ಅಪಾದನೆ ರಾಮು ಮೇಲೆ ಬಂದಿದೆ.ಸ್ಟೂಡೆಂಟ್ ಮನೆಯವರೂ ಸಹ ರಾಮು ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.ಈ ಹಿನ್ನಲೆ ಅನಗತ್ಯವಾಗಿ ತನ್ನ ಮೇಲೆ ಆರೋಪ ಬಂದಿರುವುದಕ್ಕೆ ಮನನೊಂದ ರಾಮು ಅಕ್ಟೋಬರ್ 31 ರಂದು ವಾಯ್ಸ್ ಮೆಸೇಜ್ ಮಾಡಿ ಪಕ್ಷದ ಮುಖಂಡರಿಗೆ ರವಾನಿಸಿದ್ದಾರೆ.ಕೂಡಲೇ ಪಕ್ಷದ ಮುಖಂಡರು ಪತ್ತೆಹಚ್ಚಿ ಹುಣಸೂರು ಡಿವೈಎಸ್ಪಿ ಗಮನಕ್ಕೆ ತಂದಿದ್ದಾರೆ.ನಂತರ ಮನೆಯವರಿಗೆ ಮಿಸ್ಸಿಂಗ್ ಕಂಪ್ಲೇಂಟ್ ನೀಡುವಂತೆ ಸಲಹೆ ನೀಡಿದ್ದಾರೆ.ನಂತರ ರಾಮುಗೆ ಹುಡುಕಾಡಿದಾಗ ಬೆಟ್ಟದತುಂಗಾ ಗ್ರಾಮದ ನಾಲೆಯೊಂದರ ಬಳಿ ಬೈಕ್,ಚೆಪ್ಪಲಿ,ಮೊಬೈಲ್,ಜರ್ಕಿನ್ ಕಂಡು ಬಂದಿದೆ.ನಾಲೆಯಲ್ಲಿ ಶೋಧ ಮಾಡಿದಾಗ ರಾಮು ಶವ ಇಂದು ಬೆಳಿಗ್ಗೆ ದೊರೆತಿದೆ.
ನಿಂದನೆಗೆ ಹೆದರಿದ ರಾಮು ಆತ್ಮಹತ್ಯೆಗೆ ಶರಣಾಗಿದ್ದಾನೆ.ಇದು ಆತನ ವಾಯ್ಸ್ ಮೆಸೇಜ್ ನಲ್ಲೇ ಖಚಿತವಾಗಿದೆ.ಆದರೆ ಆತ ಟೀಚರ್ ಮೇಲೆ ಆರೋಪ ಹೊರೆಸಿದ್ದಾನೆ.ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾವಿಗೂ ಮುನ್ನ ತಿಳಿಸಿದ್ದಾನೆ.ಬೆಟ್ಟದಪುರ ಪೊಲೀಸರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕಿದೆ.ವೈಜ್ಞಾನಿಕವಾಗಿ ಡಿಎನ್ ಎ ಪರೀಕ್ಷೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಿದೆ.ಟೀಚರ್ ನ ಬಿಡಬಾರದು ಎಂದು ವಾಯ್ಸ್ ಮೆಸೇಜ್ ಮಾಡಿರುವ ರಾಮು ಸಾವಿಗೆ ನ್ಯಾಯ ದೊರೆಯಬೇಕಿದೆ…