ದೆಹಲಿ ಸ್ಪೋಟ ಹಿನ್ನಲೆ ಮೈಸೂರಿನಲ್ಲಿ ಹೈ ಅಲರ್ಟ್…
- TV10 Kannada Exclusive
- November 11, 2025
- No Comment
- 34

ದೆಹಲಿ ಸ್ಪೋಟ ಹಿನ್ನಲೆ ಮೈಸೂರಿನಲ್ಲಿ ಹೈ ಅಲರ್ಟ್…

ಮೈಸೂರು,ನ11,Tv10 ಕನ್ನಡ






ದೆಹಲಿಯಲ್ಲಿ ನಡೆದ ಸ್ಪೋಟ ಹಿನ್ನಲೆ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಡಿಜಿ ಮತ್ತು ಐಜಿ ರವರ ಸೂಚನೆ ಮೇರೆಗೆ ಮೈಸೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾತ್ರಿ
ಮೈಸೂರು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ನಗರ ವಿವಿಧ ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. ಡಿಸಿಪಿಗಳು ಎಸಿಪಿಗಳು, ಇನ್ಸಪೆಕ್ಟರ್ ಸಬ್ ಇನ್ಸಪೆಕ್ಟರ್‌ಗಳು ಪೊಲೀಸ್ ಸಿಬ್ಬಂದಿ ತಪಾಸಣೆಯಲ್ಲಿ ಭಾಗಿಯಾಗಿ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ರೈಲು ನಿಲ್ದಾಣದ ಫ್ಲ್ಯಾಟ್‌ಫಾರಂ ಸೇರಿ ಹಲವು ಕಡೆ ತಪಾಸಣೆ ಮಾಡಲಾಗಿದೆ. ಪ್ರಯಾಣಿಕರ ಲಗೇಜು ಒಳಗೊಂಡತೆ ಸಂಪೂರ್ಣ ತಪಾಸಣೆ ಮಾಡಲಾಗಿದೆ. ಇನ್ನು ನಾಳೆ ತಪಾಸಣೆ ಮತ್ತಷ್ಟು ಚುರುಕುಗೊಳಿಸಲಾಗುವುದು. ಮೈಸೂರು ಅರಮನೆ ಸೇರಿದಂತೆ ಪ್ರವಾಸಿತಾಣಗಳು, ಮಾಲ್, ಪಾರ್ಕಿಂಗ್ ಸ್ಥಳಗಳು, ಹೋಟೆಲ್, ಲಾಡ್ಜ್‌ಗಳು, ದೇವಸ್ಥಾನಗಳು ಸೇರಿದಂತೆ ಎಲ್ಲಾ ಕಡೆ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತದೆ.
ಮೈಸೂರು ನಗರದ ಶಾಂತಿ, ಸುರಕ್ಷತೆ ನಮ್ಮ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುವಂತೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಯಾವುದಾದರೂ ಅನುಮಾನಾಸ್ಪದ ವಸ್ತುಗಳು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿ. ಈ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಸಹಕರಿಸುವಂತೆ ಕೋರಿದ್ದಾರೆ…