ಬೀದಿ ನಾಯಿಗಳ ದಾಳಿ…ನೂರಾರು ಕೋಳಿಗಳ ಮಾರಣಹೋಮ…
- Crime
- November 10, 2025
- No Comment
- 43

ಬೀದಿ ನಾಯಿಗಳ ದಾಳಿ…ನೂರಾರು ಕೋಳಿಗಳ ಮಾರಣಹೋಮ…

ಮಂಡ್ಯ,ನ10,Tv10
ಬೀದಿ ನಾಯಿಗಳ ದಾಳಿಗೆ ನೂರಾರು ಕೋಳಿಗಳು ಬಲಿಯಾಗಿವೆ.ಸಾಗಾಣಿಕೆ ಘಟಕದಲ್ಲಿದ್ದ 400 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ
ವಳಗೆರೆಹಳ್ಳಿ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ.ಗ್ರಾಮದ ಪ್ರಕಾಶ್ ಎಂಬುವವರಿಗೆ ಸೇರಿದ ಕೋಳಿಗಳು ಬಲಿಯಾಗಿವೆ.
ತಡರಾತ್ರಿ ಕೋಳಿ ಸಾಕಾಣಿಕೆ ಕೊಟ್ಟಿಗೆಗೆ ನುಗ್ಗಿದ ಬೀದಿನಾಯಿಗಳು ಕೋಳಿಗಳ ಮೇಲೆ ದಾಳಿ ನಡೆಸಿವೆ.ಲಕ್ಷಾಂತರ ರೂ. ಮೌಲ್ಯದ ಕೋಳಿಗಳ ಬಲಿಯಾಗಿವೆ.
ಬೀದಿನಾಯಿಗಳ ಹಾವಳಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ತಕ್ಷಣವೇ ಬೀದಿನಾಯಿಗಳ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಪರಿಹಾರಕ್ಕೆ ತಾಲ್ಲೂಕು ಆಡಳಿತಕ್ಕೆ ಮನವಿಮಾಡಿದ್ದಾರೆ…