ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ…ಕಟ್ಟಡ ಮಾಲೀಕ ಸೇರಿದಂತೆ ನಾಲ್ವರ ವಿರುದ್ದ FIR
- TV10 Kannada Exclusive
- November 13, 2025
- No Comment
- 5
ಮೈಸೂರು,ನ13,Tv10 ಕನ್ನಡ
ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ನಡೆದಿದೆ.ಸುರಕ್ಷತಾ ಕ್ರಮ ಅನುಸರಿಸದ ಕಟ್ಟಡ ಮಾಲೀಕ ಸೇರಿದಂತೆ ನಾಲ್ವರ ವಿರುದ್ದ ನಜರಬಾದ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಟಿ.ನರಸೀಪುರದ ನಿವಾಸಿ ಗಮಹದೇವಸ್ವಾಮಿ ಗಾಯಗೊಂಡ ಕೂಲಿ ಕಾರ್ಮಿಕ.ಸಿದ್ದಾರ್ಥ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಮಹದೇವಸ್ವಾಮಿ ಕೂಲಿ ಕೆಲಸ ಮಾಡುತ್ತಿದ್ದರು.ತಲೆ ಮೇಲೆ ಇಟ್ಟಿಗೆಗಳ ಬಾಂಡ್ಲಿ ಹೊತ್ತು 2 ನೇ ಮಹಡಿಯಿಂದ 3 ನೇ ಮಹಡಿಗೆ ತೆರಳುತ್ತಿದ್ದಾಗ ಸೆಂಟರಿಂಗ್ ಸೀಲಿಂಗ್ ಕುಸಿದು ಮಹದೇವಸ್ವಾಮಿ ತಲೆ ಮೇಲೆ ಬಿದ್ದಿದೆ.ತೀವ್ರ ಗಾಯಗೊಂಡ ಮಹದೇವಸ್ವಾಮಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಟ್ಟಡದ ಮಾಲೀಕ,ಮೇಸ್ತ್ರಿ,ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ದ ಮಹದೇವಸ್ವಾಮಿ ತಂದೆ ಗುರುಸ್ವಾಮಿ ನಜರಬಾದ್ ಪೊಲೀಸ್ ಠಾಣೆಯಲ್ಲಿ ಸುರಕ್ಷತಾ ಕ್ರಮ ಅನುಸರಿಸದೆ ಕೆಲಸ ಮಾಡಿಸಿದ್ದಾರೆಂದು ಆರೋಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ…