ಹುಲಿಮರಿ ಸೆರೆ…ತಾಯಿ ಹಾಗೂ ಇನ್ನೆರಡು ಮರಿಗಳ ಸೆರೆಗಾಗಿ ಕಾರ್ಯಾಚರಣೆ…
- TV10 Kannada Exclusive
- November 13, 2025
- No Comment
- 2
ಹುಣಸೂರು,ನ13,Tv10 ಕನ್ನಡ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು
ಚಿಕ್ಕಾಡಿಗನಹಳ್ಳಿಯಲ್ಲಿ ಹುಲಿ ಮರಿ ಸೆರೆಯಾಗಿದೆ.ಗ್ರಾಮದಲ್ಲಿ ಆಗಾಗ ತಾಯಿ ಹುಲಿ ಮೂರು ಮರಿಗಳು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು.ಈ ಹಿನ್ನೆಲೆ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು.ಒಂದು ಗಂಡು ಹುಲಿ ಮರಿ ಸೆರೆಯಾಗಿದೆ. ತಾಯಿ ಹುಲಿ ಎರಡು ಮರಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಬಿಳಿಕೆರೆ ಚಿಕ್ಕಾಡಿಗನಹಳ್ಳಿ ಹಾಗೂ ಇಲವಾಲ ಹೋಬಳಿ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ದೊಡ್ಡಕಾಡನಹಳ್ಳಿ, ರಟ್ನಳ್ಳಿ, ಹೊಸಕಾಮನಕೊಪ್ಪಲು, ಹಳೇಕಾಮನಕೊಪ್ಪಲು, ಈರಪ್ಪನಕೊಪ್ಪಲು ಸುತ್ತಮುತ್ತಲ ಗ್ರಾಮಗಳಲ್ಲಿ ಹುಲಿ ಹಾಗೂ ಮರಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದೆ…