ಕುರಿಹುಂಡಿ ಗ್ರಾ.ಪಂ.ಪಿಡಿಓ ಜ್ಯೋತಿ ಹಣದಾಹ…ದಾನ ಮಾಡಿದ ಪೀಠೋಪಕರಣಗಳಿಗೆ ಬಿಲ್…ಕ್ರಮ ಯಾವಾಗ…?
- TV10 Kannada Exclusive
- November 16, 2025
- No Comment
- 25




ಕುರಿಹುಂಡಿ ಗ್ರಾ.ಪಂ.ಪಿಡಿಓ ಜ್ಯೋತಿ ಹಣದಾಹ…ದಾನ ಮಾಡಿದ ಪೀಠೋಪಕರಣಗಳಿಗೆ ಬಿಲ್…ಕ್ರಮ ಯಾವಾಗ…?
ನಂಜನಗೂಡು,ನ16,Tv10 ಕನ್ನಡ
ಅಂಗನವಾಡಿ ಕೇಂದ್ರಗಳಿಗೆ ದಾನವಾಗಿ ನೀಡಿದ ಪೀಠೋಪಕರಣಗಳಿಗೆ ಗ್ರಾಮ ಪಂಚಾಯ್ತಿ ಪಿಡಿಓ ಬಿಲ್ ರೈಸ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ಸಂಘಟನೆಯ ಮುಖಂಡ ಚಂದ್ರಶೇಖರ್ ಎಂಬುವರು ಪಿಡಿಓ ಅಕ್ರಮವನ್ನ ದಾಖಲೆ ಸಮೇತ ಬಯಲಿಗೆ ಎಳೆದಿದ್ದಾರೆ.87 ಸಾವಿರಕ್ಕೆ ಬಿಲ್ ಮಾಡಿ ತಗಲಾಕಿಕೊಂಡಿದ್ದಾರೆ.
ನಂಜನಗೂಡು ತಾಲೂಕು ಕುರಿಹುಂಡಿ ಗ್ರಾಮ ಪಂಚಾಯ್ತಿ ಪಿಡಿಓ ಜ್ಯೋತಿ ವಿರುದ್ದ ಆರೋಪ ಕೇಳಿಬಂದಿದೆ.ಜೆ.ಪಿ.ಹುಂಡಿ ಆಶ್ರಮದ ಮ್ಯಾನೇಜರ್ 11 ಅಂಗನವಾಡಿ ಕೇಂದ್ರಗಳಿಗೆ 87 ಸಾವಿರ ಮೌಲ್ಯದ ಪೋಠೋಪಕರಣಗಳನ್ನ ದಾನವಾಗಿ ನೀಡಿದ್ದಾರೆ.ಕುರಿಹುಂಡಿ ಗ್ರಾಮ ಪಂಚಾಯ್ತಿ ಪಿಡಿಓ ಜ್ಯೋತಿ ಗ್ರಾಮ ಪಂಚಾಯ್ತಿ ವತಿಯಿಂದ ನೀಡಿರುವುದಾಗಿ ದಾಖಲೆಗಳನ್ನ ಸೃಷ್ಟಿಸಿ ಹಣ ಗುಳುಂ ಮಾಡಿದ್ದಾರೆ.ಈ ಸಂಬಂಧ ಇಓ ಗೆ ಚಂದ್ರಶೇಖರ್ ದೂರು ನೀಡಿದ್ದಾರೆ.ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಜ್ಯೋತಿ ರಜೆ ಹಾಕಿ ನಾಪತ್ತೆಯಾಗಿದ್ದಾರೆ.ಜ್ಯೋತಿ ರವರ ಮೇಲೆ ಇಂತಹ ಅನೇಕ ಹಗರಣಗಳು ಇವೆ ಎಂದು ಆರೋಪಿಸಿರುವ ಚಂದ್ರಶೇಖರ್ ಈ ಅಧಿಕಾರಿಯನ್ನ ಅಮಾನತುಪಡಿಸುವಂತೆ ಆಗ್ರಹಿಸಿದ್ದಾರೆ…